
ಗಜಾನನ ಗಜಾನನ | ಗಜಾನನ ಸ್ವಾಮಿ ನಿನ್ನವನಾ ||ಪ||
ಪಾರ್ವತಿನಂದನ ಪೂರ್ವಚರಿತ ಘನ ನಿರ್ವಿಘ್ನದಾಯಕ ಗಜಾನನ ||೧||
ಮೂಷಕವಾಹನ ದೋಷಕರಿಪು ಕುಲ ನಾಶಕ ವಿಘ್ನಹ ಗಜಾನನ ||೨||
ಮದನಾರಿ ಮನೋಭವ ಹೃದನಾಮ ಲೇಕದಂತ ದಯಾಸದನ ಶ್ರೀ ಲಂಬೋದರ ||೩||
ಕರುಣಾಪೂರಿತ ಸರ್ವಾಭರಣ ಭೂಷಿತ ಭಯ ಹರಣ ತ್ರಿಜಗನುತ ಗಜಾನನ ||೪||
ವಂದಿಪ ಶರಣರಿಗೆಂದೆಂದು ವಿದ್ಯೆಗಳ ತಂದಿದಿರಿಡುತಿಹೆ ಗಜಾನನ ||೫||
ತಂದೆ ಮಹಿಪತಿ ನಂದನ ಸಾರಥಿ ಇಂದೆಮ್ಮ ಉದ್ಧರಿಸೋ ಗಜಾನನ ||೬||
Lyrics in English
Gajanana gajanana | gajanana swami ninnavana ||pa||
Parvatinandana purvacharita gana nirvignadayaka gajanana ||1||
Mushakavahana doshakaripu kula nashaka vignaha gajanana ||2||
Madanari manobava hrudanaama lekhadanta dayasadana sri lambodara ||3||
Karunapurita sarvabharana bushita bhaya harana trijaganuta gajanana ||4||
Vandipa sharanarigendendu vidyegala tandidiridutihe gajanana ||5||
Tande mahipati nandana sarathi indemma uddhariso gajanana ||6||