ಗೋವಿಂದ ಸಲಹೆನ್ನನು ಸದಾನಂದ / Govinda salahennanu sadananda

ಗೋವಿಂದ ಸಲಹೆನ್ನನು
ಸದಾನಂದಾ ಗೋವಿಂದ ಸಲಹೆನ್ನನು ।।ಪ॥

ಗೋವಿಂದ ಸಲಹೆನ್ನ ಕುಮುದ ಲೋಚನ
ನಿನ್ನ ಸೇವಕರಡಿಯ ಸೇವಕನಯ್ಯ ಹರಿಯೇ ।।ಅ.ಪ ।।


ತಮನ ಸಂಹರಿಸಿ ವೇದವ ತಂದೆ ಗೋವಿಂದ
ಅಮರರಿಗೆ ಒಲಿದು ಅಮೃತವನಿತ್ತೆ ಗೋವಿಂದ
ರಮಣಿಯ ತಂದೆ ವರಹ ರೂಪಿ ಗೋವಿಂದ
ಭ್ರಮಿಸಿ ಕಂಭದೊಳು ಉದ್ಭವಿಸಿದೆ ಗೋವಿಂದ
ಕ್ಷಮೆಯನೆಳೆಯ ಬ್ರಹ್ಮಚಾರಿ ಆದೆ ಗೋವಿಂದ
ಸಮರದಲ್ ಅಖಿಲ ರಾಜರ ಕೊಂದೆ ಗೋವಿಂದ
ಕಮಲಾಕ್ಷ ಕಡಲ ಕಟ್ಟಿದ ದಿಟ್ಟ ಗೋವಿಂದ
ಮಮತೆಯೊಳ್ ಇಳೆಯ ಗೋಗಳ ಕಾಯ್ದೆ ಗೋವಿಂದ
ರಮಣಿಯರಿಗೆ ಒಲಿದು ಬತ್ತಲೆ ನಿಂತೆ ಗೋವಿಂದ
ಅಮಿತ ವಾಹನ ಗೋವಿಂದ
ನಿಂದಿಪರಿಗೆ ಶಮನನಂತಿಹ ಗೋವಿಂದ
ಇಂಗಡಲೊಳು ರಮಿಸಿ ನಿದ್ರಿಪ ಗೋವಿಂದ
ಅರಿಯದಂತೆ ವಿಮಲ ಜ್ಯೋತಿ ಗೋವಿಂದ
ಅಚ್ಯುತ ಸರ್ವೋತ್ತಮನೇ ಚಿನ್ಮಯ ಗೋವಿಂದ
ಅಚಲ ಮುಕ್ತಿ ಕ್ರಮವ ಭೋದಿಪ ಗೋವಿಂದ
ಸತತ ಕಾಯೋ ಕಮಲಾಲಿಂಗಿತ ಗೋವಿಂದ
ಭಕುತಿಯಿಂದ ನಮೋಯೆಂಬೇ ದಶಾವತಾರದ ಗೋವಿಂದ ।।೧।।

ನರ ಬೊಂಬೆಗಳ ಮಾಡಿ ಕುಣಿಸುವೆ ಗೋವಿಂದ
ನರರ ನೋಡಿ ನೋಡಿ ನಗುತಿಪ್ಪೆ ಗೋವಿಂದ
ಅರಿಯದಂತಖಿಳದೊಳಗಿಪ್ಪೆ ನೀ ಗೋವಿಂದ
ಪರಮ ಪಾವನನೆಂಬ ಬಿರುದುಳ್ಳ ಗೋವಿಂದ
ಪರಮಾತ್ಮ ಕರಿಯ ಮೇಘವ ಪೋಲ್ವ ಗೋವಿಂದ
ಪರಮ ಪುರುಷೋತ್ತಮ ನೀನೇ ಗೋವಿಂದ
ಕರಿರಾಜ ಕರಿಯಲದಹಿ ಬಂದೆ ಗೋವಿಂದ
ಮೊರೆ ಹೊಕ್ಕ ಭಕುತರ ಸಲಹೋದೆ ಗೋವಿಂದ
ಅರಿಯನು ನಾನು ನಿನ್ನವನೈಯ್ಯ ಗೋವಿಂದ
ಗರುಡ ವಾಹನ ಗೋವಿಂದ
ನಿನ್ನರಸಿಯು ಅರಿಯದಂತಿಹೆ ಗೋವಿಂದ
ಸತತ ನಿನ್ನ ಸ್ಮರಣೆಗೈವೆನೋ ಗೋವಿಂದ
ಸಾಸಿರ ಕೋಟಿ ಸುರರ ಪೊರೆವ ಗೋವಿಂದ
ಗಂಗೆಯ ಪಡೆದ ಚರಣ ನಿರ್ಗುಣ ಗೋವಿಂದ
ಮುಕ್ತಿಯು ನಿನ್ನ ಚರಣವಲ್ಲವೇ ಗೋವಿಂದ
ಶ್ರೀ ವೈಕುಂಠ ಪುರದಲ್ಲಿರುವ ಗೋವಿಂದ
ಶರಣು ಸಿರಿ ವರ ಕಾಗಿನೆಲೆ ಆದಿಕೇಶವ ಶ್ರೀ ಕೃಷ್ಣ ।।೨।।

Lyrics in english

Composer : Sri Kanaka dasaru

Govinda salahennanu
sadananda govinda salahennanu ||pa||


Govinda salahenna kumuda lochana
ninna sevakaradiya sevakanayya hariye ||a.pa||


Tamana samharisi vedava tande govinda
amararige olidu amrutavanitte govinda
ramaniya tande varaha roopi govinda
bhramisi kambhadolu govinda
kshameyaneleya brahmachari ade govinda
samaradol akhila rajara konde govinda
kamalaksha kadala kattida ditta govinda
mamteyol eleya gogala kayda govinda
ramaniyarige olidu battale ninte govinda
amita vahana govinda
nindiparige shamananantiha govinda
ingadalolu ramisi nidripa govinda
ariyadante vimala jyoti govinda
achyuta sarvottamane chinmaya govinda
achala mukti kramava bhodipa govinda
satata kayo kamalalingita govinda
bhakutiyinda namoyembe dashavatarada govinda ||1||


Nara bombegala madi kunisuve govinda
narara nodi nodi nagutippe nee govinda
ariyadantakhiladolagippe nee govinda
parama pavananemba birudulla govinda
paramatma kariya meghava polva govinda
parama puroshottama nene govinda
kariraja kariyaladahi bande govinda
more hokka bhakutara salahode govinda
ariyanu nanu ninnavanaiyya govinda
garuda vahana govinda
ninnarasiyu ariyadantihe govinda
satata ninna smaranegaiveno govinda
sasira koti surara poreva govinda
gangeya padeda charana nirguna govinda
muktiyu ninna charanavallave govinda
sri vaikunta puradalliruva govinda
sharanu siri vara kaginele adikeshava sri krishna ||2||


Leave a Reply