
ಚಿಂತೆ ಯಾತಕೊ ಬಯಲ ಭ್ರಾಂತಿ ಯಾತಕೊ
ಕಂತುಪಿತನ ದಿವ್ಯನಾಮ ಮಂತ್ರವಿರಲು ಜಪಿಸದೆ||pa||
ಏಳುತುದಯ ಕಾಲದಲ್ಲಿ ವೇಳೆಯರಿತು ಕೂಗುವಂಥ
ಕೋಳಿ ತನ್ನ ಮರಿಗೆ ಮೊಲೆಯ ಹಾಲ ಕೊಟ್ಟು ಸಲಹಿತೆ ||1||
ಸಡಗರದಲಿ ನಾರಿಜನರು ಹಡೆಯುವಾಗ ಸೂಲಗಿತ್ತಿ
ಅಡವಿಯೊಳಗೆ ಹೆರುವ ಮೃಗವ ಪಿಡಿದು ರಕ್ಷಣೆ ಮಾಳ್ಪರಾರು ||2||
ಹೆತ್ತ ತಾಯಿ ಸತ್ತ ಶಿಶುವು ಮತ್ತೆ ಕೆಟ್ಟಿತೆಂಬರು ಜನರು
ಹುತ್ತಿನ ಹಾವಿಗೆ ಗುಬ್ಬಿಗೆ ಮೊಲೆಯನಿತ್ತು ರಕ್ಷಣ ಮಾಡುವರಾರು ||3||
ಗಟ್ಟಿ ಮಣ್ಣಿನ ಶಿಶುವ ಮಾಡಿ ಹೊಟ್ಟೆಯೊಳಗೆ ಇರಿಸುವಂಥ
ಕೊಟ್ಟ ದೈವ ಕೊಂಡೊಯ್ದರೆ ಕುಟ್ಟಿಕೊಂಡು ಅಳುವುದೇಕೆ ||4||
ನಂಬಿಗೆಗಿವು ಸಾಲವೆಂದು ಹಂಬಲಿಪುದು ಲೋಕವೆಲ್ಲ
ನಂಬಿ ಪುರಂದರವಿಠಲನೆಂಬ ನಾಮ ನುಡಿದ ಮೇಲೆ ||5||
Lyrics in English
Chinte yatako bayala branti yatako
Kantupitana divyanama mantraviralu japisade ||pa||
Elutudaya kaladalliveleyaritu kuguvantha
koli tanna marige moleya haala kottu salahite ||1||
Sadagaradali narijanaru hadeyuvaga sulagitti
adaviyolage heruva mrugava pididu rakshane malpararu ||2||
Hetta tayi satta shishuvu matte kettitembaru janaru
huttina havige gubbige moleyanittu rakshana maduvararu ||3||
Gatti mannina shishuva madi hotteyolage irisuvantha
kotta daiva kondoydare Kuttikondu aluvudeke ||4||
Nambigegivu salavendu hambalipudu lokavella
nambi purandaravithalanemba nama nudida mele ||5||