
ಚೆಲುವು ನೋಡಮ್ಮ ಚೆಲುವು |ನಮ್ಮ ಉಡುಪಿ ಕೃಷ್ಣನಾ ಚೆಲುವು |ಸುಂದರ ವದನ ಅರವಿಂದ ನಯನ |ದೇವಕಿ ನಂದನ ಆನಂದ ಕಂದನ ||
ಒಂದು ಕೈಯಲಿ ಕಡೆಗೋಲು ಹಿಡಿದು | ಒಂದು ಕೈಯಲಿ ನೇಣುವ ಹಿಡಿದು |ಬಾಲಕನಂದದಿ ನಗುತಲಿ ನಿಂತ |ಕೌಪೀನಧಾರಿ ಕೃಷ್ಣ ಮುರಾರಿಯ ||
ಗೋಪಿಯರ ಮನಸೆಳೆದಾ ಪೋರಾ | ಗೋಕುಲದೆ ಹರಸಿದ ಆನಂದ ಧಾರಾ | ಗೋಪಾಲಕೃಷ್ಣ ನವನೀತ ಚೋರ | ಗೋವಿಂದ ಶ್ರೀ ಹರಿ ನಂದ ಕಿಶೋರ ||
ಅಡಗಿ ಗೋಪಿ ಚಂದನದೊಳಗೆ | ಪಡುವಲ ಕಡಲ ಹಡಗಲಿ ದಾಟಿ | ಮಧ್ವಾಚಾರ್ಯರ ಕೈಗಳ ಸೇರಿ | ಉಡುಪಿಯಲಿ ಮನೆ ಮಾಡಿ ನಿಂತಂಥ ಚೆಲುವು ||
Lyrics in English
Cheluvu nodmma cheluvu | namma udupi krishnanaa cheluvu | sundara vadana aravinda nayana | devaki nandana ananda kandana ||
Ondu kaiyali kadegolu hididu | ondu kaiyali nenuva hididu | baalakanandadi nagutali ninta | kowpeenadhari krishna muraariya ||
Gopiyara manaseleda pora | gokulade harasida ananda dhara | gopalakrishna navanita chora | govinda sri hari nanda kishora ||
Adagi hopi chandanadolage | paduvala kadala hadagali daati | madhwacharyara kaigala seri | udupiyali mane madi nintantha cheluvu ||