ಜನ್ಮ ಸಫಲವಾಯಿತು / Janma saphalavayitu

ಜನ್ಮ ಸಫಲವಾಯಿತು || ಪ ||

ಆದಿ ಅನಂತ ಜನಾರ್ದನನ ಕಂಡು
ಎನ್ನ ಜನ್ಮ ಸಫಲವಾಯಿತು || ಅ ಪ ||

ಬ್ರಹ್ಮಾನಂದ ಸುಗುಣ ನಿಮ್ಮ ಮಹಿಮೆ ಅ-
ಗಮ್ಯ ಗೋಚರನೆಂದು ಸ್ತುತಿಸುತಿರೆ
ಬ್ರಹ್ಮ ರುದ್ರಾದಿಗಳು ಇಂದ್ರ ಚಂದ್ರಾದಿಗಳು
ನಿರ್ಮಲಮೂರುತಿ ನಿಮ್ಮ ನಿಜವ ತೋರಿದ ಮ್ಯಾಲೆ || 1 ||

ಚತುರಮುಖನು ಬಂದು ಪೃಥಿವಿ ಒಳಗೆ ನಿಂದು
ಕ್ರತುಗಳ ಮಾಡಿ ಆಹುತಿ ಕೊಡಲು
ಅತಿಗ್ರಾಸವಾಯಿತೆಂದು ಅನಲ ಬಂದು ಮೊರೆಯಿಡಲು
ದ್ವಿತೀಯ ಗ್ರಾಸಕೆ ಕೈಯ ಒಡ್ಡಿ ನಿಂತದ್ದು ಕಂಡು || 2 ||

ಮೊದಲ ಬಾಗಿಲಲಿ ನಿಮ್ಮ ಮುಖಕಮಲವ ಕಂಡೆ
ಮುದದಿಂದ ಮಕರ ಕುಂಡಲ ಕಿರೀಟವ ಕಂಡೆ
ಭುಜದ್ವಯವನು ಕಂಡೆ ಶ್ರೀವತ್ಸ ಕೌಸ್ತುಭ ಕೊರಳ
ವೈಜಯಂತೀ ಮಾಲಿಕೆಗಳ ಕಂಡು ಎನ್ನ || 3 ||

ನಡುವಿನ ಬಾಗಿಲಲಿ ನಾಭಿಕಮಲ ಕಂಡೆ
ಉದ್ಭವಿಸಿ ಮೆರೆವ ವಿರಿಂಚಿಯ ಕಂಡೆ
ಜಡಿವೊ ಪೀತಾಂಬರ ನಡುವಿನೊಡ್ಯಾಣವ
ಉಡಿಗೆಜ್ಜೆ ಮೇಲಿನ ಕಿರುಗೆಜ್ಜೆಗಳ ಕಂಡು || 4 ||

ಮೂರನೆ ಬಾಗಿಲಲಿ ಮುದ್ದು ಶ್ರೀ ಚರಣವು
ಶ್ರೀದೇವಿ ಭೂದೇವಿ ಸೇವೆ ಮಾಳ್ಪುದ ಕಂಡೆ
ಸುರರು ಮಾನವರ ಕಂಡೆ ಸ್ತೋತ್ರಮಾಳ್ಪದ ಕಂಡೆ
ಉರಗಶಯನ ಮ್ಯಾಲೆ ಹಯವದನನ ಕಂಡು ಎನ್ನ || 5 ||


Lyrics in English

Composer : Sri Vadirajaru

Janma saphalavayitu ||pa||

Adi ananta janardhanana kandu
enna janma saphalavayitu ||a.pa||

Brahmananda suguna nimma mahime
agamya gocharanendu stutisutire
brahma rudradigalu indra chandradigalu
nirmala mooruti nimma nijava torida myale ||1||

Chatura mukhanu bandu prithvi olage nindu
krutugala madi aahuti kodalu
atigrasavayitendu anala bandu moreyidalu
dwiteeya grasake kaiyya oddi nintaddu kandu ||2||

modala bagilali nimma mukhakamalava kande
mudadinda makara kundala kireetava kande
bhujadwayavanu kande srivatsa koustubha korala
vaijayanti malikegala kandu enna ||3||

naduvina bagilali nabhikamala kande
udhbhavisi mereva virinchiya kande
jadiva pitambhara naduvinodyanava
udigejje melina kirugejjegala kandu ||4||

Moorane bagilali muddu sri charanavu
sridevi bhudevi seve malpuda kande
suraru manavara kande stotra malpuda kande
uragashayana myale hayavadanana kandu enna ||



Leave a Reply