
ಜಯ ಜಯ ಮೂಷಕಗಮನಾ ಜಯ ಜಯ ಗಜಾನನಾಜಯ
ಜಯ ನಾಗಾಭರಣಾ ಜಯ ಏಕದಂತ ಜಯ ಜಯ ||pa||
ಮತಿಯ ಕೊಡು ಪಾರ್ವತಿಯ ನಿಜ ತನುಜನೆ ಬಿಡದೆ ನಿನ್ನನು ನಾನು |ನುತಿಸುವೆ ಕ್ಷಿತಿಯೊಳಗೆ ಶ್ರೀ ಲಕುಮಿ ಪತಿಯ ಕೊಂಡಾಡಿ | ಸದ್ಗತಿಯ ಪಡೆಯುವದಕ್ಕೆ ಸಾರಥಿಯಾಗು ದೇವಾ ||1||
ಆಕಾಶದಭಿಮಾನಿ ಅಂಗಜನ ಚಾಪ ನಿರಾಕರಿಸಿ |
ಬಿಸುಟ ಲಂಬೋದರನೆ ಏಕ ಪಿಂಗಾದಿಗಳ ಪ್ರಿಯ ಹಸ್ತ |ಚತುಷ್ಟ ಲೋಕದೊಳು ಭಜಿಸುವರ ವಿದ್ಯಾದಾ ನಿಧಿಯೆ ||2||
ಸೀತಾ ರಮಣನಿಂದ ಪೂಜಿತನಾಗಿವ ನದಿ ತೀರದಲ್ಲಿ| ಮೆರೆವ ಗಣೇಶಾ ಸೇತುಮಾಧವ ವಿಜಯವಿಠ್ಠಲ |ರೇಯನದೂತನು ನೀನೆ ಪಾಶಾಂಕುಶಧರನೆ ||3||
Lyrics in English
Jaya jaya mushakagamana jaya jaya gajanana |
Jaya jaya nagabarana jaya ekadanta jaya jaya ||pa||
Matiya kodu parvatiya nija tanujane bidade ninnanu nanu |
Nutisuve kshitiyolage sri lakumi patiya kondadi |
Sadgatiyapadeyuvadakke saarathiyagu deva ||1||
Akashadabhimani angajana chapa nirakarisi |
Bisuta lambodarane eka pingadigala priya hasta |
Chatushtalokadolu bajisuvara vidyada nidhiye ||2||
Sita ramananinda pujitanaagiva nadi tiradalli |
Mereva ganesha setumadhava vijayaviththala |
reyana dutanu nine pashankushadharane ||3||