
ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣ
ನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೋ ಕರುಣ ||
ಅಳಗಿರಿಯಿಂದಲಿ ಬಂದ ಸ್ವಾಮಿ ಅಂಜನಗಿರಿಯಲಿ ನಿಂದ
ಕೊಳಲು ಧ್ವನಿಯೂದೋ ಚಂದ ನಮ್ಮ ಕುಂಡಲರಾಯ ಮುಕುಂದ ||1||
ಬೇಟೆಯಾಡುತ ಬಂದ ಸ್ವಾಮಿ ಬೆಟ್ಟದ ಮೇಲೆ ನಿಂದ
ವೀಟುಗಾರ ಗೋವಿಂದ ಅಲ್ಲಿ ಜೇನು ಸಕ್ಕರೆಯನು ತಿಂದ ||2||
ಮೂಡಲ ಗಿರಿಯಲಿ ನಿಂದ ಮುದ್ದು ವೆಂಕಟಪತಿ ಬಲವಂತ
ಈಡಿಲ್ಲ ನಿನಗೆ ಶ್ರೀಕಾಂತ ಈರೇಳು ಲೋಕಕನಂತ||3||
ಆಡಿದರೆ ಸ್ಥಿರವಪ್ಪ ಅಬದ್ಧಗಳಾಡಲು ಒಪ್ಪ
ಬೇಡಿದ ವರಗಳಿನಿಪ್ಪ ನಮ್ಮ ಮೂಡಲಗಿರಿ ತಿಮ್ಮಪ್ಪ ||4||
ಅಪ್ಪವು ಅತಿರಸ ಮೆದ್ದ ಸ್ವಾಮಿ ಅಸುರರ ಕಾಲಲಿ ಒದ್ದ
ಸತಿಯ ಕೂಡಾಡುತಲಿದ್ದ ಸ್ವಾಮಿ ಸಕಲ ದುರ್ಜನರನು ಗೆದ್ದ ||5||
ಬಗೆ ಬಗೆ ಭಕ್ಷ್ಯ ಪರಮಾನ್ನ ನಾನಾ ಬಗೆಯ ಸಕಲ ಶಾಲ್ಯನ್ನ
ಬಗೆ ಬಗೆ ಸೊಬಗು ಮೋಹನ್ನ ನಮ್ಮ ನಗುಮುಖದ ಸುಪ್ರಸನ್ನ ||6||
ಕಾಶಿ ರಾಮೇಶ್ವರದಿಂದ ಅಲ್ಲಿ ಕಾಣಿಕೆ ಬರುವುದು ಚಂದ
ದಾಸರ ಕೂಡೆ ಗೋವಿಂದ ಅಲ್ಲಿ ದಾರಿ ನಡೆವುದೆ ಚೆಂದ ||7||
ಎಲ್ಲಾ ದೇವರ ಗಂಡ ಅವ ಚಿಲ್ಲರೆ ದೈವದ ಮಿಂಡ
ಬಲ್ಲಿದವರಿಗೆ ಉದ್ದಂಡ ಶಿವ ಬಿಲ್ಲ ಮುರಿದ ಪ್ರಚಂಡ ||8||
ಕಾಸು ತಪ್ಪಿದರೆ ಪಟ್ಟಿ ಬಡ್ಡಿ ಕಾಸು ಬಿಡದೆ ಗಂಟು ಕಟ್ಟಿ
ದಾಸನೆಂದರೆ ಬಿಡ ಗಟ್ಟಿ ನಮ್ಮ ಕೇಸಕ್ಕಿ ತಿಮ್ಮಪ್ಪಸೆಟ್ಟಿ ||9||
ದಾಸರ ಕಂಡರೆ ಪ್ರಾಣ ತಾ ಧರೆಯೊಳಧಿಕ ಪ್ರವೀಣ
ದ್ವೇಷಿಯ ಗಂಟಲ ಗಾಣ ನಮ್ಮ ದೇವಗೆ ನಿತ್ಯ ಕಲ್ಯಾಣ ||10||
ಮೋಸ ಹೋಗುವನಲ್ಲಯ್ಯ ಒಂದು ಕಾಸಿಗೆ ಒಡ್ಡುವ ಕಯ್ಯ
ಏಸು ಮಹಿಮೆಗಾರನಯ್ಯ ನಮ್ಮ ವಾಸುದೇವ ತಿಮ್ಮಯ್ಯ ||11||
ಚಿತ್ತಾವಧಾನ ಪರಾಕು ನಿನ್ನ ಚಿತ್ತದ ದಯ ಒಂದೇ ಸಾಕು
ಸತ್ಯವಾಹಿನಿ ನಿನ್ನ ವಾಕು ನೀನು ಸಕಲ ಜನರಿಗೆ ಬೇಕು ||12||
ಅಲ್ಲಲ್ಲಿ ಪರಿಷೆಯ ಗುಂಪು ಮತ್ತಲ್ಲಲ್ಲಿ ತೋಪಿನ ತಂಪು
ಅಲ್ಲಲ್ಲಿ ಸೊಗಸಿನ ಸೊಂಪು ಮತ್ತಲ್ಲಲ್ಲಿ ಪರಿಮಳದಿಂಪು ||13||
ಅಲ್ಲಲ್ಲಿ ಜನಗಳ ಕೂಟ ಮತ್ತಲ್ಲಲ್ಲಿ ಬ್ರಾಹ್ಮಣರೂಟ
ಅಲ್ಲಲ್ಲಿ ಪಿಡಿದ ಕೋಲಾಟ ಮತ್ತಲ್ಲಿಂದ ಊರಿಗೆ ಓಟ ||14||
ಪಾಪ ವಿನಾಶಿನಿ ಸ್ನಾನ ಹರಿ ಪಾದೋದಕವೆ ಪಾನ
ಕೋಪ ತಾಪಗಳ ನಿಧಾನ ನಮ್ಮ ಪುರಂದರ ವಿಠಲನ ಧ್ಯಾನ ||15||
Lyrics in English
Tirupati Venkataramana Ninagyatake Baradu Karuna
Nambide Ninnaya Charana Paripalisa Beko Karuna ||pa||
Alagiriyindalli Banda Svami Anjanagiriyali Ninda
Kolaludo Dvani Chanda Namma Kundalaraya Mukunda ||1||
Beteyaduta Banda Svami Bettada Mele Ninda
Nitugara Govinda Alli Jenu Sakkareyanu Tinda ||2||
Moodala Giriyali Ninda Muddu Venkatapati Balavanta
Idilla Ninage Shrikanta Irelu Lokakananta ||3||
Adidare Sthiravappa Abhaddagaladalu Oppa
Bedida Varagalanippa Namma Mudalagiri Timmappa ||4||
Appava Atirasa Medda Svami Asurara Kalali Odda
Satiyayara Kudadutalidda Svami Sakala Durjanaranu Gedda ||5||
Bage Bage Bhaksa Paramanna Nana Bageya Sakala Shalyanna
Bage Bage Sobagu Mohanna Namma Nagumukhada Suprasanna ||6||
Kashi Rameshvaradinda Alli Kanike Baruvude Chanda
Dasara Kude Govinda Alli Dari Nadevude Chanda ||7||
Ella Devara Ganda Ava Chillare Daivada Minda
Ballidavarige Uddanda Shiva Billa Murida Prachanda ||8||
Kasu Tappidare Patti Baddi Kasu Bidade Gantu Katti
Dasanendare Bida Gatti Namma Kesakki Timmappasetti ||9||
Dasara Kandare Prana Ta Dhareyolagadhika Pravina
Dveshiya Gantala Gana Namma Devage Nitya Kalyana ||10||
Mosa Hoguvanallayya Ondu Kasige Odduva Kayya
Esu Mahimegaranayya Namma Vasudeva Timmayya ||11||
Chittavadhana Paraku Ninna Chittada Daya Onde Saku
Satyavahini Ninna Vaku Ninu Sakala Janarige Beku ||12||
Allalli Parisheya Gumpu Mattallalli Topina Tampu
Allalli Sogasina Sompu Mattallalli Parimaladimpu||13||
Allalli Janagala Kuta Mattallalli Brahmanaruta
Allalli Pidida Kolata Mattallallinda Urige Ota ||14||
Papa Vinashini Snana Hari Padodakave Pana
Kopa Tapagala Nidhana Namma Purandara Vittalana Dhyana
Click the below link to listen : https://youtu.be/JtxernSV3VY by Putturu Narasimha Nayak
https://youtu.be/1bsMZNoBJAA by Sri Ramakrishna Katukukke