ತೂಗುವೆ  ರಂಗನ  ತೂಗುವೆ/Tooguve rangana

ತೂಗುವೆ  ರಂಗನ  ತೂಗುವೆ  ಕೃಷ್ಣನ
ತೂಗಿ  ಜೋ  ಜೋ  ಹಾಡುವೇ ||ಪ||

ಮೇಲುಕೋಟೆ  ಸ್ವಾಮಿ  ಚೆಲುವ ರಾಯನ
ಬೇಲೂರ  ಶ್ರೀಚೆನ್ನ  ಕೇಶವನಾ |
ಉಡುಪಿಯಲಿ  ವಾಸಿಸುವ  ಶ್ರೀಕೃಷ್ಣನ
ಶ್ರೀರಂಗಪಟ್ಟಣದಿ  ಮಲಗಿದವನ ||ತೂಗುವೆ||

ಕಣ್ಣಲೇ  ಹುಣ್ಣಿಮೆ  ತಂದವನ
ನಗುವಲ್ಲೇ ಮಲ್ಲಿಗೆ  ಚೆಲ್ಲುವನ |
ಚೆಲುವಲ್ಲೇ  ತಾವರೆಯ  ನಾಚಿಸುವನ
ಈ ಮನೆಗೆ  ಬೆಳಕಾಗಿ  ಬಂದವನ ||ತೂಗುವೆ ||

ಆಲದೆಲೆಯ  ಮೇಲೆ ಮಲಗಿದವನಾ
ಭಕ್ತರ  ಪಾಲಿಗೆ ಪರಮಾತ್ಮನ
ಮತ್ತೆ  ನಮಗಾಗಿ  ಇಳೆಗೆ ಬಂದವನ
ಜಗವನ್ನೇ  ತೋರುವ  ಜಗದೀಶನ ||ತೂಗುವೆ||

Lyrics in English

Tooguve rangana tooguve krishnana|toogi jo jo haaduve||pa||

Melukote swami cheluvarayana belura srichenna keshavana| udupiyali vasisuva sri krishnana srirangapattanadi malagidavana ||tooguve||

Kannale hunnime tandavana naguvalle mallige chelluvana| cheluvalle taavareya naachisuvana e manege belakaagi bandavana||tooguve||

Aaladeleya mele malagidavana bhaktara paalige paramaatmana| matte namagagi elege bandavana jagavanne toruva jagadishana||tooguve||


Leave a Reply