ದಾರಿ ಯಾವುದಯ್ಯ ವೈಕುಂಟಕೆ/ Daari yaavudayya

ರಚನೆ : ಪುರಂದರದಾಸರು

ದಾರಿ ಯಾವುದಯ್ಯ ವೈಕುಂಟಕೆ ದಾರಿ ತೋರಿಸಯ್ಯ ||

ದಾರಿ ಯಾವುದಯ್ಯ ದಾರಿ ತೋರಿಸಯ್ಯ
ಅಧರ ಮುರುತಿ ನಿನ್ನ ಪಾದ ಸೇರುವುದಕ್ಕೆ ||

ಬಲು ಭವದನುಭವದಿ ಕತ್ತಲೆಯೊಳು ಬಲು ಅಂಜುತ ನಡುಗಿ |
ಬಳಲುತ್ತ ತಿರುಗಿದೆ ಹಾದಿಯ ಕಾಣದೆ
ಹೊಳೆವಂಥ ದಾರಿಯ ತೋರೋ ನಾರಾಯಣ ||

ಪಾಪ ಪೂರ್ವದಲ್ಲಿ ಮಾಡಿದುದಕೆ ಲೇಪವಾಗಿದೆ ಕರ್ಮ |
ಈ ಪರಿಯಿಂದಲಿ ನಿನ್ನ ನೆನೆಸಿಕೊಂಬೆ
ಶ್ರೀಪತಿ ಸಲಹೆನ್ನ ಭೂಪ ನಾರಾಯಣ ||

ಇನ್ನು ನಾ ಜನಿಸಲಾರೆ ಭೂಮಿಯ ಮೇಲೆ ನಿನ್ನ ದಾಸನಾದೇನೋ |
ಪನ್ನಗ ಶಯನ ಶ್ರೀಪುರಂದರ ವಿಠ್ಠಲ
ಇನ್ನು ಪುಟ್ಟಿಸದಿರೋ ಎನ್ನ ನಾರಾಯಣ ||

Lyrics in English

Daariyaavudayya Vaikuntake daari torisayya || pa ||

Daari yaavudayya daari torisayya
aadhara mooruti ninna paada seruvudakke || a.pa ||

Balu bhavadanubhavadi kattaleyolu
balu anjuta nadugi
balalutta tirugide haadiya kaanade
holevantha daariya toro Naarayana || 1 ||

Paapa poorvadalli maadidudake
lepavaagide karma
ee pariyindali ninna nenesikombe
Shree pati salahenna bhoopa Naarayana || 2 ||

Innu naa janisalaare Bhoomiya mele
ninna daasa naadeno
pannaga shayana Shree Purandara Vittala
innu puttisadiru enna Naarayana || 3 ||


Leave a Reply