ದಾಸರ ನಿಂದಿಸಬೇಡ ಮನುಜ / Dasara nindisabeda manuja

ದಾಸರ ನಿಂದಿಸಬೇಡ ಮನುಜ |
ಹರಿ | ದಾಸರ ನಿಂದಿಸಬೇಡ ||

ರಾಮನ ನಿಂದಿಸಿ ರಾವಣ ಕೆಟ್ಟ |
ವಿಭೀಷಣಗಾಯಿತು ಪಟ್ಟ ||

ಭೂಮಿಯ ಲೋಭದಿ ಕೌರವ ಕೆಟ್ಟ |
ಧರ್ಮಗೆ ರಾಜ್ಯವ ಬಿಟ್ಟ ||

ಉಡಿಯಲ್ಲಿ ಕೆಂಡವ ಕಟ್ಟಿಕೊಂಡರೆ |
ಸುಡದಲೆ ಬಿಡುವುದೇನಣ್ಣ ||

ಪೊಡವಿಯ ಜನರಿಗೆ ಬಡತನ ಬಂದರೆ |
ಬಿರುನುಡಿ ಆಡದಿರಣ್ಣ ||

ದೇವಕಿ ಸೆರೆಯನು ಬಿಡಿಸಿದ ದಾಸರು |
ನರರೇನೈ ಈ ಜಗದೊಳು ||

ಭಾವಜನಯ್ಯನ ಭಕುತರ ಸೇವಿಸೆ |
ಪಾವನ ಮಾಡುವ ಪುರಂದರವಿಠಲ ||

Lyrics in English

Dasara nindisabeda manuja |
hari dasara nindisabeda ||


Ramana nindisi ravana ketta |
vibhishanagayitu patta ||

Bhumiya lobhadi kourava ketta |
dharmage rajyava bitta ||

Udiyalli kendava kattikondare |
sudadale biduvudenanna ||


Podaviya janarige badatana bandare |
birunudi adadiranna ||

Devaki sereyanu bidisida dasaru |
nararenai e jagadolu ||


Bhavajanayyana bhakutara sevise |
pavana maduva purandara vittala ||


Leave a Reply