ದ್ವಾರಕಾದ್ರಿವಾಸ ಕೃಷ್ಣ ಕೃಷ್ಣ ಕೃಷ್ಣ / Dwarakadrivasa krishana krishna

ದ್ವಾರಕಾದ್ರಿವಾಸ ಕೃಷ್ಣ ಕೃಷ್ಣ ಕೃಷ್ಣ
ದ್ವಾರಕಾದ್ರಿವಾಸ ||

ದ್ರೌಪದಿ ಮೊರೆಕೇಳಿ ಸಲಹಿದ ಶ್ರೀ ಕೃಷ್ಣ
ದುರುಳ ದುರ್ಯೋಧನನ ಮಡುಹಿದ  ಶ್ರೀ ಕೃಷ್ಣ
ದುರುಳ ದುಶ್ಯಾಸನನ  ಮನಸು ಬಿಡಿಸೋ ಕೃಷ್ಣ
ದುರುಳ ಶಕುನಿಯಂತ ದುರುಬುದ್ದಿ ಬಿಡಿಸೋ ಕೃಷ್ಣ ||

ದ್ವಾರಕಾದ್ರಿ ವಾಸ ಕೃಷ್ಣ ಕೃಷ್ಣ ಕೃಷ್ಣ
ದ್ವಾರಕಾದ್ರಿ ವಾಸ ||

ಪಾಂಡವರಿಗೆ ಅಕ್ಷಯಪಾತ್ರವಿತ್ತೆ ಶ್ರೀ ಕೃಷ್ಣ
ದಾಸನಿಗೆ ಭಕ್ತಿ ಅಕ್ಷಯ ಮಾಡೋ ಶ್ರೀ ಕೃಷ್ಣ
ಅರ್ಜುನಗೆ ಸಾರಥಿಯಾಗಿ ಸಲಹಿದ ಶ್ರೀ ಕೃಷ್ಣ
ಹರಿದಾಸನಿಗೆ ಸಖನಾಗಿ ಭವದಾಟಿಸೋ ಶ್ರೀ ಕೃಷ್ಣ ||

ದ್ವಾರಕಾದ್ರಿ ವಾಸ ಕೃಷ್ಣ ಕೃಷ್ಣ ಕೃಷ್ಣ
ದ್ವಾರಕಾದ್ರಿ ವಾಸ ||

ಭೀಮನನ್ನು ಕಾಳಗದಲ್ಲಿ ಸಲಹಿದ ಶ್ರೀ ಕೃಷ್ಣ
ವಿದುರನ ಮನೆಯಲ್ಲಿ ಪಾಲುಂಡೆ ಶ್ರೀ ಕೃಷ್ಣ
ನೀಚೋತ್ತಮ ಭೇದವಿಲ್ಲದೆ ರಕ್ಷಿಸಿದೆ ಶ್ರೀ ಕೃಷ್ಣ
ಅಭಿನವ ಪುರಂದರ ವಿಠಲ ಎನ್ನ ರಕ್ಷಿಸೋ ಕೃಷ್ಣ ||

ದ್ವಾರಕಾದ್ರಿ ವಾಸ ಕೃಷ್ಣ ಕೃಷ್ಣ ಕೃಷ್ಣ
ದ್ವಾರಕಾದ್ರಿ ವಾಸ ||

Lyrics in English

Dwarakadrivasa Krishna Krishna Krishna
dwarakadrivasa ||

Droupadi moreleli saluhida Sri Krishna
durula duryodhanana maduhida Sri Krishna
durula dushyasana manasu bidiso Sri Krishna
durula shakuniyanta durubuddhi bidiso Krishna ||

Pandavarige akshayapatravitte Sri Krishna
dasanige bhakti akshaya mado Sri Krishna
arjunage sarathiyagi salahida Sri Krishna
haridasarige sakhanagi bhavadatiso Sri Krishna ||

bhimanannu lkalagadali saluhida Sri Krishna
vidurana maneyalli palunde sri krishna ||
neechottama bhedavillade rakshiside Sri Krishna
abhinava purandara vittala Enna rakshiso Krishna ||


Leave a Reply