
ಧಣಿಯಾ ನೋಡಿದೆನೋ ವೆಂಕಟನ
ಮನಧಣಿಯಾ ನೋಡಿದೆನೋ ಶಿಖಾಮಣಿ ತಿರುಮಲನಾ
ಚರಣ ದಂದುಗೆ ಗೆಜ್ಜೆಯವನ ಪಿತಾಂಬರ ಉಡಿಗೆ ವೊಡ್ಯಾನವಿಟ್ಟಿಹನ
ಮೆರೆಯುವ ಮಾಣಿಕ್ಯ ವದನಾ ಚೆನ್ನ ಸರ ಹಾರ ಪದಕ ಕೌಸ್ತುಭ ಧರಿಸಿಹನಾ |ಧ |
ಕೊರಳೊಳು ವೈಜಯಂತಿ ಧರಿಸಿಹನ ಕಿರು ಬೆರಳ ಮುದ್ರಿಕೆ ಭುಜ ಕೀರ್ತಿ ಒಪ್ಪುವನ
ಅರಳು ಕಣ್ಗಳ ನೋಟದವನ ಸುಳಿ ಗುರುಳು ನೊಸಲಾಪಟ್ಟಿ ನಾಮ ಇಟ್ಟಹನ |ಧ |
ಶಂಖ ಚಕ್ರವ ಪಿಡಿದಿಹನಾ ಕೈ ಕಂಕಣ ತೊಳ್ಬಂದಿ ಬಾಪುರಿಯವನಾ
ಶಂಖನೂದುವ ಸರ್ವೋತ್ತಮನ ಭುವೈಕುಂಠವಿದೆಂದು ಹಸ್ತದಿ ತೋರಿಸುವನ |ಧ |
ಕೆಸಕ್ಕಿ ಅನ್ನ ಉಂಬುವನ ಬಡ್ಡಿ ಕಾಸು ಬಿಡದಹಾಗೆ ಕೂಡಿ ಹಾಕುವನಾ
ಘೊಷನಾದಕ್ಕೆ ವೊಲಿದಿಹನ ಮೈಯೊಳು ಸುಸುವ ಗಂಧ ಕಸ್ತುರಿಲೆಪಿತನಾ |ಧ |
ನೀಟಾದ ವಲ್ಲಿ ಹೊದ್ದಿಹನ ಹೊರ ಬೇಟೆಯಾಡಿ ಅಂದದಿಂದ ಬರುವನ
ನೋಟದಿ ಬಂದು ನಿಂತಿಹನ ಈ ಶ್ರಿಷ್ಟಿ ಒಡೆಯ ಪುರಂದರ ವಿಠಲನ್ನ |ಧ |
Lyrics in English
Daniya nodideno venkatana mana daniya nodide shikhamani tirumalana ||
Charanadanduge gejjeyavana pitambara udige odyana vittihana
mereyuva manikyadavana chenna sara hara padaka kaustubha darisidana ||1||
Koralolu vaijayanti dharisihana kiru berala mudrike bhuja kirtiloppuvana
aralu kangala nodadavana suli guluru nosala patti nama hacchihana||2||
Shankha chakrava pididihana kai kankana tolbandi bapuriyavana
shankhanuduva sarvottamana buvaikuntavidendu hastadi torisuvana ||3||
Nitada valli hoddihana hora beteyadi andadinda baruvana
notadi bandu nintihana i shrasti odeya purandara vittalana ||4||