
ಧನ್ಯನಾದೆ ವಿಠಲನ ಕಂಡು ।।ಪ।।
ಧನ್ಯನಾದೆ ಕಾಮನಪಿತ ಲಾವಣ್ಯ
ಮೂರಿತಿಯ ಕಣ್ಣಲ್ಲಿ ಕಂಡು ।।ಅ.ಪ।।
ದೇವವರೇಣ್ಯ ಸದಾವಿನೋದಿ ವೃಂ-
ದಾವನಸಂಕಾರ ಗೋಪನ ಕಂಡು ।।೧।।
ಮಂಗಳಾಂಗ ಕಾಳಿಂಗಮರ್ದನ ಮಾ-
ತಂಗವರದ ವರ ರಂಗನ ಕಂಡು ।।೨।।
ಹಾಟಕಾಂಬರ ಕಿರೀಟಸಾರಥಿ
ತಾಟಾಕಾರಿ ವೈರಾಟನ ಕಂಡು ।।೩।।
ಚಿಂತಿತ ಫಲದ ಕೃತಾಂತನಾತ್ಮಜಾ-
ದ್ಯಂತರಹಿತ ನಿಶ್ಚಿಂತನ ಕಂಡು ।।೪।।
ಮಾತುಳಾಂತಕ ವಿಧಾತಪಿತ ಜಗ-
ನ್ನಾಥವಿಠಲ ವಿಖ್ಯಾತನ ಕಂಡು ।।೫।।
Lyrics in English
Dhanyanade vithalana kandu ||pa||
Dhanyanade kamanapita lavanya
muritiya kannalli kandu ||a.pa||
Devavarenya sadavinodi vrun-
davanasankara gopana kandu ||1||
Mangalanga kalingamardana ma-
tangavarada vara rangana kandu ||2||
Hatakambara kiritasarathi
tatakari vairatana kandu ||3||
Chintitapalada krutantanatmaja-
dyamtarahita nischintana kandu ||4||
Matulantaka vidhatapita jaga-
nnathavithala vikyatana kandu ||5||