
ಧವಳ ಗಂಗೆಯ ಗಂಗಾಧರ ಮಹಾಲಿಂಗ
ಮಾಧವನ ತೋರಿಸಯ್ಯ ಗುರುಕುಲೋತ್ತುಂಗ || ಪ ||
ಅರ್ಚಿಸಿದವರಿಗಭೀಷ್ಟಯ ಕೊಡುವ
ಹೆಚ್ಚಿದ ಅಘಗಳ ತರಿದು ಬಿಸುಟುವ
ದುಶ್ಚರಿತಗಲೆಲ್ಲ ದೂರದಲ್ಲಿಡುವ
ನಮ್ಮಚ್ಯುತಗಲ್ಲದ ಅಸುರರ ಬಡಿವ || ೧ ||
ಮಾರನ ಗೆದ್ದ ಮನೋಹರ ಮೂರ್ತಿ
ಸಾರ ಸಜ್ಜನರಿಗೆ ಸುರ ಚಕ್ರವರ್ತಿ
ಧಾರುಣಿಯೆಲ್ಲ ತುಂಬಿತು ನಿನ್ನ ಕೀರ್ತಿ
ಮುರಾರಿಯ ತೋರಿಸಯ್ಯ ನಿನಗೆ ಶರಣಾರ್ಥಿ || ೨ ||
ಚೆನ್ನ ಪ್ರಸನ್ನ ಶ್ರೀ ಹಯವದನನ್ನ
ಅನುದಿನ ನೆನೆವಂತೆ ಮಾಡೊ
ನೀನೆನ್ನ ಅನ್ಯರನರಿಯೆನೊ ಗುರುವೆಂಬೆ
ನಿನ್ನ ಇನ್ನಾದರು ಹರಿಯ ತೋರೊ ಧೀರ ಮುಕ್ಕಣ್ಣ || ೩ ||
Lyrics in English
composed by Sri Vadirajaru
Dhavala gangeya gangadhara mahalinga
madhavana torisayya gurukulottunga || pa ||
archisidavarigabhishtaya koduva
hecchida aghagala taridu bisutuva
duscharitagalella duradalliuuva
nammachyutagallada asurara badiva || 1 ||
marana gedda manohara murti
sara sajjanarige sura chakravarti
dharuniyella tumbitu ninna kirti
murariya torisayya ninage saransrthi || 2 ||
chenna prasanna sri hayavadananna
anudina nenevante mado ninenna
anyaranariyeno guruvenbe ninna
innadaru hariya toro dhira mukkanna || 3 ||
Click the link to listen the song