ನಡೆದು ಬಾಮ್ಮ ಲಕ್ಷ್ಮೀ /Nadedu baamma lakshmi

ನಡೆದು ಬಾಮ್ಮ ಲಕ್ಷ್ಮೀ  ನಿನಗೆ
ನಡೆಮುಡಿಯ ಹಾಸುವೆ|
ನಡೆಮುಡಿಯ ಹಾಸಿ ನಾ
ಚರಣ ಕಮಲಕ್ಕೆರಗುವೆ||ನಡೆದು||

ಮರುಗ, ಮಲ್ಲಿಗೆ, ಧವನ, ಸಂಪಿಗೆ
ಸರಗಳನೇ ಪೂಜಿಪೆ|
ಸರಗಳನೇ ಪೂಜಿಸಿ
ನಾ ವರಗಳನ್ನೇ ಬೇಡುವೆ||ನಡೆದು||

ಹೀರೆ, ಕುಂಬಳ ಕಾಯಿ, ಪಡವಳ
ಶಾಖ ಪಾಕವ ಮಾಡುವೆ|
ಘನ್ನ ಶಾವಿಗೆ ಭಕ್ಷವು
ನೈವೇದ್ಯವು ಪರಮಾನ್ನವು||ನಡೆದು||

ಎಷ್ಟು ಬೇಡಿದರು ದಯ ಏಕೆ ಬರಲಿಲ್ಲ
ಲಕ್ಷ್ಮೀ  ನಿನಗೆ|
ದಿಟ್ಟ ಪ್ರಸ್ಸನ್ನ ವೆಂಕಟ ವಿಠ್ಠಲನ
ಪಟ್ಟದರಾಣಿಯೆ||ನಡೆದು||

Lyrics in English

Nadedu baamma lakshmi ninage
nademudiya haasuve|
nademudiya haasi naa
charana kamalakkeraguve |nadedu||

Maruga, mallige, dhavana, sampige
saragallane pujipe|
saragallane pujisi
naa varagallanne beduve||nadedu||

Heere, kumbala kaayi, padavala
shaakha paakava maaduve|
ghanna shaavige bhakshavu
naivedyavu paramaannavu||
||nadedu||

Eshtu bedidaru daya eke baralilla
lakshmi ninage|
ditta prassanna venkata vittalanapattadaraaniye||nadedu||


Leave a Reply