ನಮ್ಮಮ್ಮ ಶಾರದೆ / Nammamma sharade

ರಚನೆ : ಕನಕದಾಸರು

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ ||ಪ||

ಕಮ್ಮಗೋಲನ ವೈರಿ ಸುತನಾದ ಸೊಂಡಿಲ ಹೆಮ್ಮಯ ಗಣನಾಥನೆ ಅಮ್ಮಯ್ಯ ||ಅ.ಪ.||

ಮೋರೆ ಕಪ್ಪಿನ ಭಾವ ಮೊರದಗಲ ಕಿವಿ ಕೋರೆ ದಾಡೆಯವನ್ಯಾರಮ್ಮ
ಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನ ಧೀರ ತಾ ಗಣನಾಥನೆ ಅಮ್ಮಯ್ಯ ||1||

ಉಟ್ಟ ದಟ್ಟಿಯು ಮತ್ತೆ ಬಿಗಿದುಟ್ಟ ಚಲ್ಲಣದ ದಿಟ್ಟ ತಾನಿವನ್ಯಾರಮ್ಮ
ಪಟ್ಟದ ರಾಣಿ ಪಾರ್ವತಿಯ ಕುಮಾರನೆ ಹೊಟ್ಟೆಯ ಗಣನಾಥನೆ ಅಮ್ಮಯ್ಯ||2||

ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನ್ಯಾರಮ್ಮ
ಲೇಸಾಗಿ ಸುಜನರ ಸಲಹುವ ನೆಲೆಯಾದಿ ಕೇಶವನ ದಾಸ ಕಾಣೆ ಅಮ್ಮಯ್ಯ ||3||

Lyrics in English

This beautiful song composed by Sri Kanakadaasaru

Nammamma sharade uma maheshwari nimmolagihanyaramma||pa||


Kammagolana vairi suthanaada sondila hemmeya gananaathane||anu.pa||


Morekappina bhava moradagalada kivi koredadeyanyaramma||
Muru kannina sutha muriditta chandrana dhiratha gananaathane ammaiyya ||1||


Utta dattiyu bigidutta challanada dittathanivanyaramma||
Pattada raani parvathiya kumaranu hotteya gananaathane ammaiyya|2|


Raashi vidhyeya balla ramani hambalanolla bhashiganivanyaramma||
Lesaagi sujanara salahuva neleyaadi keshava dasa kane ammaiyya||3||


Leave a Reply