ನಾನೇಕೆ ಪರದೇಶಿ ನಾನೇಕೆ ಬಡವನು/ Naneke paradeshi Naneke badavanu

ನಾನೇಕೆ ಪರದೇಶಿ ನಾನೇಕೆ ಬಡವನು
ಶ್ರೀನಿಧಿ ಹರಿ ಎನಗೆ ನೀ ನಿರುವ ತನಕ | ಪ |

ಪುಟ್ಟಿಸಿದ ತಾಯಿ ತಂದೆ ಇಷ್ಟಮಿತ್ರನು ನೀನೇ
ಅಷ್ಟು ಬಂಧು ಬಳಗ ಸರ್ವ ನೀನೆ
ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ
ಶ್ರೇಷ್ಠ ಮೂರ್ತಿ ಕೃಷ್ಣ ನೀನಿರುವ ತನಕ |೧|

ಒಡಹುಟ್ಟಿದವ ನೀನೆ ಒಡಲಿಗೆ ಹಾಕುವ ನೀನೇ
ಉಡಲು ಹೊದೆಯಲು ವಸ್ತ್ರ ಕೊಡುವ ನೀನೆ
ಮಡದಿ ಮಕ್ಕಳನೆಲ್ಲ ಕಡೆ ಹಾಯಿಸುವ ನೀನೇ
ಬಿಡದೆ ಸಲಹುವ ಒಡೆಯ ನೀನಿರುವ ತನಕ. | ೨|

ವಿದ್ಯೆ ಹೇಳುವ ನೀನೇ ಬುದ್ದಿ ಕಲಿಸುವ ನೀನೆ
ಉದ್ಧಾರ ಕರ್ತ ನೀನೆ ಮುದ್ದು ಶ್ರೀ ಪುರಂದರ ವಿಠಲ
ನಿನ್ನ ಡಿ ಮೇಲೆ ಬಿದ್ದುಕೊಂಡಿರುವನಿಗೆ ಏತರ ಭಯವೋ |೩|

Lyrics in English

Naneke paradeshi naneke badavanu
srinidhi enage nee niruta Tanaka ||pa||

Puttisida tayi tande ishtamitranu neene
ashtu Bandhu balava sarva neene
pettigeyolagina ashtaabharana neene
shreshta murti krishna neeniruva Tanaka ||1||

Odahuttidava neene odaligendu hakuva neene
udalu hodeyalu vastra koduva neene
madadi makkalanella Kade hayisuva neene
bidade salahuva odeyane neeniruva Tanaka ||2||

Vidye geluva neene Buddhism kalisuva neene
uddhara karta neene muddu Sri purandara vittala
ninnadi mele biddukondiruvanige etara bhayavo ||3||


Leave a Reply