
ನಾರಾಯಣ ಎನ್ನಬಾರದೆ ||೨||
ನಿಮ್ಮ ನಾಲಿಗೆಯೊಳು
ಮುಳ್ಳು ಮುರಿದಿಹುದೆ
ಕಲ್ಲು ಜಡಿದಿಹುದೆ ||ನಾರಾಯಣ||
ವಾರಣಾಸಿಗೆ ಪೋಗಿ ದೂರ ಬಳಲೆಲೇಕೆ |
ನೀರ ಕಾವಡಿ ಪೊತ್ತು ತಿರುಗಲೇಕೆ |
ಊರೂರು ತಪ್ಪದೆ ದೇಶಾಂತರವೇಕೆ||೨||
ದಾರಿಗೆ ಸಾಧನವಲ್ಲವೆ ಹರಿನಾಮ ||೨ ||ನಾರಾಯಣ ||
ನಿತ್ಯುಪವಾಸವಿದ್ದು ಹಸಿದು ಬಳಲಲೇಕೆ||೨||
ಮತ್ತೆ ಚಳಿಯೊಳು ಗಂಗೆ ಮುಳುಗಲೇಕೆ |
ಹಸ್ತವ ಪಿಡಿದು ಮಾಡುವ ಜಪ ತಪವೇಕೆ||೨||
ಮುಕ್ತಿಗೆ ಸಾಧನವಲ್ಲವೆ ಹರಿನಾಮ ||ನಾರಾಯಣ||
ಸತಿಸುತರನು ಬಿಟ್ಟು ಯತಿಗಳಾಶ್ರಮವೇಕೆ |
ವ್ರತ ಕೃಚ್ಛ್ರ ನೇಮ ನಿಷ್ಠೆಗಳೇತಕೆ |
ಪೃಥಿವಿಯೊಳಗೆ ನಮ್ಮ
ಪುರಂದರವಿಠಲನ||ಪ್ರಥಿವಿ||
ಅತಿಶಯದಿಂದೊಮ್ಮೆ ನೆನೆದರೆ ಸಾಲದೆ ||ನಾರಾಯಣ||
Lyrics in English
Narayana ennabarade | nimma naligeyolu
mullu muridihude kallu jadidihude || Narayana ||
Varanasige pogi doora balalaleke |
neera kavadi pottu tirugaleke |
urooru tappade deshantaraveke |
daarige sadhanavallave harinama || Narayana ||
Nityupavasaviddu hasidu balalaleke |
matte chaliyolu gange mulugaleke |
hastava pididu maduva japa tapaveke |
muktige sadhanavallave harinama|| narayana ||
Satisutaranu bittu yatigalashramaveke |
vruta krucchra nema nishtegaleke |
pruthviyolage namma purandara vittalana |
atishayadindomme nenedarensalade || narayana ||