
ರಚನೆ : ಪುರಂದರದಾಸರು
ನಾರಾಯಣ ನಿನ್ನ ನಾಮದ ಸ್ಮರಣೆಯ || ಪ ||
ಸಾರಾಮೃತವು ಎನ್ನ ನಾಲಿಗೆಗೆ ಬರಲಿ|| ಅ. ಪ ||
ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ
ಎಷ್ಟಾದರೂ ಮತಿಗೆಟ್ಟು ಇರಲಿ
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಾ ಮಂತ್ರದ ನಾಮವ || ೧ ||
ಸಂತತ ಹರಿ ನಿನ್ನ ಸಾಸಿರದ ನಾಮವ
ಅಂತರಂಗದಲ್ಲಿ ಇರಿಸಿ
ಎಂತೋ ಪುರಂದರ ವಿಠಲ ರಾಯನ
ಅಂತ್ಯ ಕಾಲದಲ್ಲಿ ಚಿಂತಿಸೋ ಹಾಗೆ || ೨ ||
Lyrics in English
Saathiya : Sri Purandaradaasaru
Narayana ninna namada smaraneya || pa ||
saramrutavu enna naligege barali || a.pa ||
Kashtadallirali utkrushta-dallirali
eshtadaru matigettu irali
krishna krishna endu shishtaru peluva
ashtakshara maha mantrada namava ||1||
Santata hari ninna sasirada namava
antarangadalli irisi
ento purandara vitala rayana
antya kaladalli chintiso hage ||2||
By M.S.Subbalakshmi