
ನಿಂದಕರಿರಬೇಕು ಇರಬೇಕು ನಿಂದಕರಿರಬೇಕು ||
ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ದಿಯೋ ಹಾಂಗೆ ||
ಅಂದಂದು ಮಾಡಿದ ಪಾಪವೆಂಬ ಮಲ |
ತಿಂದು ಹೋಗುವರಯ್ಯ ನಿಂದಕರು |
ವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮ |
ಪೊಂದಿದ ಪುಣ್ಯವನೊಯ್ಯುವರಯ್ಯ ||
ದುಷ್ಟಜನರು ಈ ಸೃಷ್ಟಿಯೊಳಿದ್ದರೆ |
ಶಿಷ್ಟ ಜನರಿಗೆಲ್ಲ ಕೀರ್ತಿಗಳು |
ಇಷ್ಟಪ್ರದ ಶ್ರೀಕೃಷ್ಣ ನಿನ್ನೊಳು |
ಇಷ್ಟೇ ವರವನು ಬೇಡುವೆನಯ್ಯ ||
ದುರುಳ ಜನಂಗಳು ಚಿರಕಾಲವಿರುವಂತೆ |
ಕರವ ಮುಗಿದು ವರವ ಬೇಡುವೆನು |
ಪರಿಪರಿ ತಮಸಿಗೆ ಗುರಿಯಹರಲ್ಲದೆ |
ಪರಮ ದಯಾನಿಧೆ ಪುರಂದರವಿಠಲ ||
Lyrics in English
Nindakarirabeku erabeku nindakarirabeku |
|pa||Handiyiddare keri hyange shuddhiyo hange |anupa|
Andandu madida papavenba mala
Tindu hoguvarayya nindakaru
Vandisi stutisuva janarellaru namma
Pondida punyavanoyyuvarayya |1|
Dushtajanaru I srushtiyoliddare
Shishta janarigella kirtigalu
Ishtaprada shrikrushna ninnolu
Ishte varavanu beduvenayya |2|
Durula janangalu cirakalaviruvante
Karava mugidu varava beduvenu
Paripari tamasige guriyaharallade
Parama dayanidhe Purandaravithala |3|
Youtube link : https://youtu.be/yPmm6NdiGEs by Sri Vidya Bhushana Theertha Swamiji