
ನಿನ್ನ ದಿವ್ಯ ಮೂರುತಿಯ
ಕಣ್ಣು ದಣಿಯೆ ನೋಡಿ
ಧನ್ಯನಾದೆನೋ ಧರೆಯೊಳು
||ನಿನ್ನ ದಿವ್ಯ||
ಇನ್ನು ಈ ಭವ ಭಯಕೆ
ಅಂಜಲೇತಕೊ ನಾನು|
ಚೆನ್ನ ಶ್ರೀ ವೆಂಕಟೇಶ ಶ್ರೀಶ
||ನಿನ್ನ ದಿವ್ಯ||
ಏಸು ಜನ್ಮದ ಪುಣ್ಯ ಬಂದೊದಗಿತೋ
ಶ್ರೀಸ್ವಾಮಿ ಪುಷ್ಕರಿಣಿಯೊಳು
ನಾನಾ ಜಪ ತಪ ಮಾಡಿ ವರಹ ದೇವರ ನೋಡಿ
ಶ್ರೀಸ್ವಾಮಿ ಮಹಾದ್ವಾರಕೆ
ಈ ಶರೀರವನು ಈಡಾಡಿ ಪ್ರದಕ್ಷಿಣೆ ಮಾಡಿ
ಲೇಶದಿಂ ಪೊಗಳುತಲೀ….
ಆ ಸುವರ್ಣದ ಗರುಡ ಕಂಭವನೆ ನೋಡಿ
ಸಂತೋಷದಿಂ ಕೊಂಡಾಡಿದೆ ಬಿಡದೆ
||ನಿನ್ನ ದಿವ್ಯ||
ನೆಟ್ಟನೆರಡನೆ ದ್ವಾರವನೆ ದಾಂಟಿ ಪೋಗುತಲಿ
ದಟ್ಟನಿಯು ಬಹುವಾಗಿ ಜನದಲಿ
ಗಟ್ಟಿ ಮನದಲಿ ತಲೆಯ ಚೆಟ್ಟಿಡುತ ನೆಟ್ಟನೆ
ಕಟ್ಟಾಂಜನಕೆ ತಾ ಬರುತಲಿ
ಕೃಷ್ಣಾಂಜಿನಾದವರ ಪೆಟ್ಟುಗಳ ತಾಳುತಲಿ
ಕಂಗೆಟ್ಟು ಹರಿಹರಿ ಎನುತಲಿ
ಬೆಟ್ಟದಧಿಪತಿ ನಿನ್ನ ದ್ರಷ್ಠಿಯಿಂದಾ ಕಾಣುತಲಿ
ಸುಟ್ಟಿತೆನ್ನಯ ದುರಿತವು ಸರ್ವವೂ
||ನಿನ್ನ ದಿವ್ಯ||
ಶಿರದಲ್ಲಿ ರವಿಕೋಟಿ ತೇಜದಿಂದೆಸೆವಂತ
ವರ ಕಿರೀಟವು ಕುಂಡಲ
ಕೊರಳಲೊಳು ಇಹ ಸರಿಗೆ
ವೈಜಯಂತಿಯ ಮಾಲೆ
ಪರಿಪರಿಯ ಹಾರಗಳನು
ಉರದಿ ಶ್ರೀವತ್ಸವನು ,ಕರದಿ ಶಂಖಚಕ್ರಗಳು
ವರನಾಭಿ ಮಾಣಿಕವನೂ
ನಿರ್ವಮಾ ಮಣಿ ಖಚಿತ ಕಟಿಸೂತ್ರ ಪೀತಾಮ್ರ
ಚರಣದ್ವಯದಂದುಗೆಯನೂ ಇನ್ನು
||ನಿನ್ನ ದಿವ್ಯ||
ಇಕ್ಷುಛಾಪನ ಪಿತನೆ,ಪಕ್ಷೀಂದ್ರವಾಹನನೆ
ಲಕ್ಷೀಪತಿಯೆ ಕಮಲಾಕ್ಷನೆ
ಅಕ್ಷಯ ಅಜ ಸುರೇಂದ್ರಾಧಿ ವಂದಿತನೆ
ಸಾಕ್ಷಾತ್ ಜಗನ್ನಾಥನೆ
ರಾಕ್ಷಸಾಂತಕನೆ ನಿರಪೇಕ್ಷ ನಿತ್ಯ ತ್ರಪ್ತನೆ
ನಿರುಪಮ ನಿಸ್ಸೀಮನೆ
ಕುಕ್ಷಿಯೊಳಗೀರೇಳು ಲೋಕವನು ತಾಳ್ದವನೆ
ರಕ್ಷಿಸುವುದೆಂದು ದಯದಿ ಮುರಾರಿ
||ನಿನ್ನ ದಿವ್ಯ ||
ಉರಗಗಿರಿ ಅರಸು ನಿಮ್ಮ ಚರಣಗಳ ಕಂಡಿಂದು
ಉರಗ, ಕರಿ, ವ್ಯಾಘ್ರ, ಸಿಂಹ
ಅರಸು ಚೋರಾಗ್ನಿ ವ್ರಶ್ಚಿಕ ಮೊದಲಾದ
ಪರಿಪರಿಯ ಬಹಳ ಭಯವು
ಪರಮ ವಿಷಯ ಲಂಪಟರೊಳು ನಾ ಸಿಗದಂತೆ
ಕರುಣಿಸುವುದೊಳಿದು ದಯದೀ….
ಸ್ಮರಗಧಿಕ ಲಾವಣ್ಯ ತಂದೆ ಪುರಂದರವಿಠ್ಠಲ
ಶರಣ ಜನ ಕರುಣಾ ನಮಃ ದೇವಾ…
||ನಿನ್ನ ದಿವ್ಯ||
Lyrics in English
Composer : Sri Purandara dasaru
Ninna divyamurutiya
kannu daniye nodi
dhanyanadeno dhareyolu || ninna divya ||
Ennu e bhava bhayake
anjaletako nanu |
chenna sri venkatesha srisha || ninna divya ||
Esu janmada punya bandodagito
sriswamy pushkariniyol |
nana japa tapa madi varah devara nodi|
sriswami mahadwarake |
e shareeravanu edadi pradakshine madi
leshadim pogalutali ….
aa suvarnada garuda kambhavanu nodi
santhoshadim kondadide bidade || ninna divya ||
Nettaneradane dwaravane daanti pogutali
dattaniyu bahuvagi janadali
gatti manadali taleya chettiduta nettane
kattanjanake taa barutali
krishnamjinadavara pettugala talutali
kangettu harihari enutali
bettadadipathi ninna drishtiyinda kanutali
suttitennaya duritavu sarvavu || ninna divya ||
Shiradalli ravikoti tejadindasevanta
vara kireetavu kundala
koralolu eha sarige
vaijayantiya male
paripariya haragalanu
uradi srivatsavanu karadi shankhachakragalu
varanabhimanikavanu
nirvamamani khachita katisutra peetamra
charanadwayadandugeyanu ennu || ninna divya ||
Ikshuchapana pitane pakshindra vahanane
lakshmipatiye kamalakshane
akshaya aja surendradi vanditane
sakshat jagannathane
rakshasantakane nirapeksha nitya truptane
nirupama nissimane
kukshiyolageerelu lokavanu taldavane
rakshisuvudendu dayadi murari ||ninna divya ||
Uragagiri arasu nimma charanagala kandindu
uraga, kari, vyaghra, simha
arasu choragi, vrishchika modalada
paripariya bahala bhayavu
parama vishaya lampatarolu naa sigadante
karunisudolidu dayadi ….
smaragadhika lavanya tande purandaravittala
sharana jana karuna namah deva …. || ninna divya ||
**************************