
ನಿನ್ನ ಭಕುತಿಯನು ಬೀರೋ
ದೇವ| ಎನ್ನ ಮನ್ನಿಸಿ ಸಲಹುವರಾರೋ||ಪ||
ಸನ್ನುತ ಸನ್ಮಾರ್ಗ ತೋರೋ,
ಪ್ರಪನ್ನ| ರಕ್ಷಕ ಬೇಗ ಬಾರೋ ||ಅ.ಪ||
ಪನ್ನಗಶಯನ ಲಕ್ಷ್ಮೀಶ
ವೇದ ಸನ್ನುತಪದ ಸರ್ವೇಶ
ಇನ್ನು ಬಿಡಿಸೊ ಮೋಹಪಾಶ
ಆ|ಪನ್ನ ರಕ್ಷಕ ಶ್ರೀನಿವಾಸ ||
ನಾರದ ಗಾನವಿಲೋಲ
ಸ್ವಾಮಿ| ಭೂರಿ ಭಕ್ತರ ಪರಿಪಾಲ
ಭೂರಮಣ ಕರುಣಾಲವಾಲ
ನವ|ನೀರದಶ್ಯಾಮ ಗೋಪಾಲ ||
ಕರಿರಾಜ ವರದಾ ಅಪ್ರಮೇಯ
ಎನ್ನ ಅರಿತು ಪಾಲಿಸೊ ಯೋಗಿಧ್ಯೇಯ
ಸುರಮುನಿ ಹೃದಯನಿಕಾಯ
ಗುರು ಪುರಂದರವಿಠಲರೇಯ||
Lyrics in English
Ninna bhakutiyanu beero deva |
enna mannisi salahuvararo || pa ||
Sannuta sanmarga toro,
Prasanna | rakshaka bega baro || a.pa ||
Pannagashayana lakshmeesha
veda sannutapada sarvesha |
innu bidiso mohapaasha
aa panna rakshaka sreenivasa ||
Narada ganavilola
swami bhuri bhaktara paripala |
bhuramana karunalavala
nava neeradashyama gopala ||
Kariraja varada aprameya
enna aritu paliso yogidjyeya |
suramuni hrudayanikaya
guru purandara vittalareya ||