
ನೋಡಿ ದಣಿಯವು ಕಂಗಳು
ರೂಢಿಯೊಳಗತ್ಯಧಿಕ ರಂಗೇಶನತಿ ಚೆಲುವ || ಪ||
ಕೆಂದಾವರೆಯ ಪೋಲ್ವ ಪದಗಳಿಗೆ
ನವರತ್ನ ಅಂದುಗೆಯ ಮೇಲೆ ಹೊಂಗೆಜ್ಜೆ
ಪೊಳೆಯೆ ಅಂದದಿಂ ಸಕಲ ದೇವೋತ್ತಮರ
ಮುಕುಟದೊಲವಿಂದ ಬೆಳಗುತಿಹ ಕೋಮಲ ಪದಾಬ್ಜಗಳ ||
ಥಳಥಳಿಪ ಶಶಿಯ ಕಾಂತಿಯ ಜರೆವ ಮುಖಕಾಂತಿ
ಪೊಳೆವ ಜಾನುವಿನ ಜಂಘೆಯ ಸೊಂಪಿನ
ಪೊಳೆವ ಊರುಗಳ ಪೀತಾಂಬರಾಹಿತ ಮಧ್ಯ
ಸುಳಿನಾಭಿ ತ್ರಿವಳಿ ಮಣಿಖಚಿತ ವೃಂದಗಳ ಮಿಗೆ ||
ಶ್ರೀ ವತ್ಸಲಾಂಛನ ಕುಂಡಲ ಪ್ರಭೆಯು
ಶ್ರೀ ವಾಸುದೇವನ ಸ್ಮಿತ ವದನದ
ಪಾವನಾತ್ಮಕನ ಚಂಪಕ ನಾಸಿಕದ ಬೆಡಗು
ದೇವದೇವನ ನಯನಗಳ ಕಡು ಚೆಲುವ ||
ಮದನಕಾರ್ಮುಕಕೆ ಮಾರ್ಮಲೆವ ಪುರ್ಬಿನ ಗಾಡಿ
ಮುದವೀವ ಕರ್ಣಕುಂಡಲವು ಪೊಳೆಯೆ
ಪದುಮನಾಭನ ಪಣೆಯ ಕಸ್ತೂರಿತಿಲಕವನು
ಯದುಕುಲೋತ್ತಮನ ಮಣಿ ಖಚಿತ ವೃಂದಗಳ ಮಿಗೆ ||
ಉಭಯ ಕಾವೇರಿ ಮಧ್ಯದಿ ಶೇಷ ತಲ್ಪದೊಳು
ಶುಭ ಕ್ರಿಯಾಮೃತ ಶ್ರೀ ಲತಾಂಗಿ ಸಹಿತ
ಅಭಯವನು ಭಕುತರಿಗೆ ಅನವರತ ಕರೆದೀವ
ಪುರಂದರವಿಠಲನ ಪದಯುಗಳ ಕಡು ಚೆಲುವ ||
Lyrics in English
Composer : Purandara dasaru
Nodi daniyavu kangalu
roodhiyolagatyadika rangeshanati cheluva ||pa||
Kendavareya polva padagalige
navaratna andugeya mele hoogejje
poleye andadim sakala devottamara
mukutadolavinda belagutiha komala padabjagala ||
Thalathalipa shashiya kantiya jareva
mukhakanti poleva januvina jangheya
sompina poleva oorugala peetambarahita madhya
sulinabhi trivali manikhachita vrundagala mige||
Sri vatsalanchana kundala prabheyu
sri vasudevana smitavadanada pavanatmaka
champakanasikada bedagu
devadevana nayanagala kadu cheluva ||
Madanakarmukake marmaleva
purbina gadi mudaveeva karnakundalavu
poleye padumanabhana paneya kasturi tilakavanu
yadukulottamana manikhachita vrundagala mige||
Ubhaya kaverimadhyadi sheshatalpadolu
shubha kriyamruta sri latangi sahita
abhyavanu bhakutarige anavarata
karedeeva purandaravittalana padayugala kadu cheluva ||