ನೋಡು ನೋಡು ಕಣ್ಣಾರೆ / Nodu nodu kannaare

ನೋಡು ನೋಡು ಕಣ್ಣಾರೆ ನಿಂತಿಹಳು
ನಗು ನಗುತಾ ಚಾಮುಂಡಿ ನಿಂತಿಹಳು
ತಾಯಿ ಹೃದಯ ತಂದ ತುಂಬು ಮಮತೆಯಿಂದ
ಬಾ ಇಲ್ಲಿ ಓ ಕಂದ ಎನುತಿಹಳೂ
ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು || ಪ ||

ಮೈಸೂರು ನಗರದ ಬೆಟ್ಟದ ಮೇಲೆ
ಮಹಿಷಾಸುರಸೂದನಿಯ ವೈಭವ ಲೀಲೆ
ಧನುಜ ಸಂಹಾರಿಣಿ ತ್ರಿಭುವನ ಪೋಷಿಣಿ
ಶಂಕರನ ರಾಣಿಗೀವ ಹೂಗಳ ಮಾಲೆ || 1 ||

ನಂಬಿರುವ ಭಕ್ತರ ರಕ್ಷೆಗಾಗಿ
ನಂಬದಿಹ ದುಷ್ಟರ ಶಿಕ್ಷೆಗಾಗಿ
ನಿಂತಿಹಳು ನೋಡಲ್ಲಿ ಶೂಲಪಾಣಿಯಾಗಿ
ಕರುನಾಡ ಮಕ್ಕಳ ಹಿರಿ ದೈವವಾಗಿ || 2 ||

ಉಕ್ಕಿಬಹ ನದಿಯಲ್ಲೇ ಅವಳನಗೆ
ಬೀಸಿಬಹ ಗಾಳಿಯಲೇ ಅವಳುಸಿರು
ಹಸಿಹಸಿರು ಪೈರುಗಳೇ ಅವಳುಡುಗೆ
ಆ ತಾಯಿ ರೂಪವೋ ಹಲವು ಬಗೆ || 3 ||

Lyrics in English

Nodu nodu kannaare nintihalu
nagu nagutaa Chaamundi nintihalu
taayi hrudaya tanda tumbu mamateyinda
baa illi o kanda enutihalu
kai beesi balige namma karedihalu || pa ||

Mysuru nagarada bettada mele
Mahishaasura soodaniya vaibhava leele
dhanuja samhaarini tribhuvana poshini
Shankarana raanigeeva hoogala maale || 1 ||

Nambiruva bhaktara rakshegaagi
nambadiha dushtara shikshegaagi
nintihalu nodallu shoola paaniyaagi
Karunaada makkala hiri daivavaagi || 2 ||

Ukkibaha nadiyalle avalanage
beesibaha gaaliyale avalusiru
hasihasiru pairugale avaluduge
aa taayi roopavi halavu bage || 3 ||


Leave a Reply