ಪಾರ್ವತಿ ಪ್ರಿಯ ಗಂಗಾಧರ / Parvati priya gangadhara

ಪಾರ್ವತಿ ಪ್ರಿಯ ಗಂಗಾಧರ||೨||
ಶಿವನೆ ಪಾರ್ವತಿ ಪ್ರಿಯ ಗಂಗಾಧರ |
ಗಣಪತಿ ಪಿತ ಹರನೇ||೨||   ||ಪಾರ್ವತಿ||

ಕೈಲಾಸವಾಸನೆ ಕಾಶಿವಿಶ್ವೇಶ್ವರನೆ||೨||
ಪಂಪಾ ಪುರವಾಸನೆ  ||ಕೈಲಾಸ||
ಗಜ ಚರ್ಮಾಂಭರ ಚಂದ್ರಚೂಢ ಶಿವನೇ |
ಹಿಮಗಿರಿಯ ನಿವಾಸನೇ.. ||ಪಾರ್ವತಿ||

ರಾಮ ನಾಮವ ಜಪಿಸುವ ಶಂಕರನೇ||೨||
ರಾಮೇಶ್ವರವಾಸನೇ   |ರಾಮನಾಮ||
ತ್ರಿಶೂಲ ಢಮರುಗ ಹಸ್ತಾಲಂಕೃತನೆ||೨||
ಕಾಶಿಪುರವಾಸನೇ…  ||ಪಾರ್ವತಿ ||

ಮನೋಭಿಮಾನಿಯೆ ಮನೋ ನಿಯಾಮಕನೆ |
ಸುರಮುನಿ ಜನ ವಂದ್ಯನೇ||೨||
ನೀಲಕಂಠನೇ ರುಂಡಮಾಲಧರನೆ||೨|
ಗೌರಿ ಪತಿ ಈಶನೇ… ||ಪಾರ್ವತಿ||

ಗಂಗೆಯ ಧರಿಸಿದ ಗಂಗಾಧರ‌ ಹರನೆ   |
ಗಿರಿಜಾ ಸತಿ ಧರನೇ   ||ಗಂಗೆಯ||
ಹರಸದ್ಗುರು ರಕ್ಷಕ ವಿಠ್ಠಲನ ಧ್ಯಾನಿಪನೇ ||
ದಾಕ್ಷಾಯನಿ ಅರಸನೇ…  ||ಪಾರ್ವತಿ||

Lyrics in English

Parvati priya gangadhara |
shivane Parvati priya gangadhara |
ganapati pita harane ||parvati||

Kailasavasane Kashi vishweshwarane |
pampapura vasane |
gaja charmambhara chandrachuda shivana |
himagiriya nivasane || Parvati ||

Rama namava japisuva shankarane |
rameshwaravasane |
trishula damaruga hastalankrutane |
kashipuravasane || Parvati ||

Manobhimaniye mano niyamakane |
suramuni Jana vandyane |
neelakantane rundamaladharane |
gowripati eeshane || Parvati ||

Gangeya dharisida gangadhara harane |
girija sati dharane |
harasadguru rakshaka vittalana dhyanipane |
dakshayini arasane ||Parvati ||

Leave a Reply