
ಪಾಲಿಸೆ ಪದುಮಾಲಯೇ ನೀನೆ ಗತಿ
ಪಾಲಕನು ತಾನಾಗಿ ಗೋಪಿಗೆ
ಲೀಲೆಯಿಂದಲಿ ನಂದಗೋಕುಲ
ಬಾಲೆಯರ ಮೋಹಿಸುತ ಅಸುರರ
ಕಾಲನೆನಿಸಿದ ಬಾಲಕನ ಪ್ರಿಯೆ
ಅನ್ಯರ ನೆನೆಯಲೊಲ್ಲೆ – ನಿನ್ನಯಪಾದ
ವನ್ನು ನಂಬಿದೆ ನೀಬಲ್ಲೆ – ತಡಮಾಡದಲೆ
ಚಿನ್ನ ಕರೆಯಲು ಘನ್ನ ಮಹಿಮನು
ಉನ್ನತದ ರೂಪಿನಲಿ ಗುಣ ಸಂಪನ್ನ
ರಕ್ಕಸರನ್ನು ಸೀಳಿದ
ಪನ್ನಗಾದ್ರಿ ನಿವಾಸ ಹರಿಪ್ರಿಯೇ (ಪಾಲಿಸೆ )
ಅರಿಯದ ತರಳನೆಂದು – ಶ್ರಿಪತಿಸತಿ
ಕರುಣದಿ ಸಲಹೆ ಬಂದು – ಕರುಣಾಸಿಂಧು
ಸರಸಿಜಾಸನ ರುದ್ರರೀರ್ವರ
ಬರದಿ ಮೂರ್ಖನು ಸುರರ ಬಾಧಿಸೆ
ಅರಿವರರ ದಂಡೆತ್ತಿ ಬಹುಮುಖ
ದುರುಳನಾಶಿರ ತರಿದ ವನಪ್ರಿಯೇ (ಪಾಲಿಸೆ )
ಅಜಮನಸಿಜ ಜನನಿ – ಅಂಬುಜಪಾಣಿ
ಭುಜಗ ಸನ್ನಿಪ ವೇಣಿ – ನಿತ್ಯ ಕಲ್ಯಾಣಿ
ಕುಜನ ಮರ್ಧನ ವಿಜಯ ವಿಠಲನ
ಭಜಿಸಿ ಪಾಡುವ ಭಕ್ತ ಕೂಟವ
ನಿಜದಿ ಸಲಹುವೆ-ನೆಂಬ ಬಿರುದುಳ್ಳ
ವಿಜಯ ಸಾರಥಿ ವಿಶ್ವಂಬರ ಪ್ರಿಯೆ (ಪಾಲಿಸೆ
Lyrics in English
Palise padumalaye neene gathi
Palakanu thanagi gopige
leele indhali nandha gokula
balayera mohisade asurara
kalanenisida balakana priye ||
Anyara neneyalolle ninnaya padavannu nambhide
niballe thade madadhale chinna kareyalu ganna
mahimanu unnatha ruppinali guna sampanna
rakkasaranna seelida pannagadri nivasa haripriye |palise|
Ariyadha tharalanendhu – shripathisathi karunadi
salahe bandhu – karunasindhu sarasijasana
rudrarirvara baradi murkhanu surara badise |
arivarara dandetthi bahuvida durulana shira tharidu vanapriye ||palise||
Ajamanasija janani – ambujapani
bhujaga sannipa -veni, nithya kalyani
kujana mardhana vijaya vittalana
bhajisi paduva bhaktha kutava
nijadi salahuva – nemba birudulla vijaya sarathi vishvambara priye ||palise||
………………………………………………………………………………………………………………………….
Youtube link : https://youtu.be/3_WHdtjJtrU by Sri Vidyabhushana Theertha Swamiji