
ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ ||2 times||
ಕಾರುಣ್ಯ ನಿಧಿ ಎನ್ನ ಕಾಯಬೇಕಯ್ಯ ಹರಿ ವಾರಿಜ ನಾಭ ಶ್ರೀ ಕೃಷ್ಣ||2 times||ಪೂರ್ವ ಜನ್ಮದಲಿ|
ಹುಟ್ಟಿದಂದಿಂದಿಗು ಸುಖವೆಂಬುದನು ಅರಿಯೆ ಕಷ್ಟ ಪಡುತಿಹೆನಯ್ಯ ಕೃಷ್ಣಾ |2 times||
ದಟ್ಟ ದಾರಿದ್ರ್ಯ ವನು ಪರಿಹರಿಸದಿರೆ ದೂರು ತಟ್ಟುವುದು ನಿನಗಯ್ಯ ಕೃಷ್ಣ||2 times||
ಕಾಸಿನ ಆಸೆಯನು ಮಾಡಿ ಬಹುದಿನದಿಂದ ಆಯಾಸದೊಳಗಿಹೆನು ಕೃಷ್ಣ|
ಆಸೆಯನು ಬಿಡಿಸೆಮಗೆ ದೋಷವನು ಪರಿಹರಿಸು ಸಾಸಿರ ನಾಮದ ಶ್ರೀ ಕೃಷ್ಣ ||2 times||ಪೂರ್ವ ಜನ್ಮದಲಿ||
ಮುಟ್ಟಲಂಜುವರು ಬಂದುಗಳು ಕಂಡರೆ ಎನ್ನ ಅಟ್ಟಿಕೊಳುತಿಹರಯ್ಯ ಕೃಷ್ಣ|| 2times||
ತೊಟ್ಟಿಲ ಶಿಶು ಬಾಯ ಬಿಡುವತೆರೆದಂತೆ ಕಂಗೆಟ್ಟು ಶೋಕಿಸುವೆನು ಕೃಷ್ಣ|| 2 times||
ಈ ಪರಿಯಿಂದ ನಾನಾಪಟ್ಟು ಪೇಳಿದರೆ ನಾಥನ್ನ ಕಾಯದಿದೆಕೋ ಕೃಷ್ಣ || 2 times||
ಶಪಿಸುವೆನೆಂದರೆ ಸಾವು ಹುಟ್ಟು ನಿನಗಿಲ್ಲ ಏಸು ದೊರೆದನವಯ್ಯ ಕೃಷ್ಣ||2 times||
ತಂದೆ ತಾಯಿಯು ಇಲ್ಲ ಬಂಧು ಬಳಗವೂ ಇಲ್ಲ ಇಂದೆನಗೆ ಗತಿಯೇನು ಕೃಷ್ಣ|| 2times||
ಮಂದರಧರ ಶ್ರೀ ಪುರಂದರ ವಿಠ್ಠಲ ನೀ ಬಂದು ನೆಲೆಯಾಗಯ್ಯ ಕೃಷ್ಣ || 2 times||ಪೂರ್ವ ಜನ್ಮದಲಿ ||
ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣಕೃಷ್ಣಾ
ಕೃಷ್ಣಾ ಕೃಷ್ಣಾ ಕೃಷ್ಣಾ ಕೃಷ್ಣಾ
Lyrics in English
Purva janmadali na madida aghadinda urviyolu janisideno krishna |
karunya nidhiyenna kayabekayya hari varijanabha shri krishna||
Huttidandindigu sukhavembudanu ariye kashtavsgirutihudu krishna|
datta daridaryavanu pariharisadire duru tattuvudu ninagayya krishna||
Kasina aseyanu madi bahu dinadinda ayasadolagirutiheno krishna|
Aseyanu bidisi mige doshavanu parihariso sasira nama shri krishna||
Muttalanjuvaru bandhugalu kantare enna atti koludiharayya krishna|
tottila shishu baya biduva teranante kangettu shokisuveno krishna||
I pariyinda nanapattu pelidara nathanna kayadideko krishna|
shapisuvenendare savu huttu ninagilla esu doredanavayya krishna|
Tande tayiyu illa bandhu balagavu illa indenu terahele krishna|
mandaradhara shri purandara vittala ni bandu neleyagayya krishna ||