
ಪೊಂದಿ ಬದುಕಿರೊ ರಾಘವೇಂದ್ರ ರಾಯರ || ಪ ||
ಕುಂದದೆಮ್ಮನು ಕರುಣದಿಂದ ಪೊರೆವರ || ಅ ||
ನಂಬಿ ಸ್ತುತಿಸುವ ಜನಕದಂಬಕಿಷ್ಟವ
ತುಂಬಿ ಕೊಡುವನು ಅನ್ಯರ್ಹ೦ಬಲೀಯನು || ೧ ||
ಅಲವಬೋಧರ ಸುಮತ ಜಲಧಿಚ೦ದಿರ
ಒಲಿದು ಭಕ್ತರ ಕಾಯ್ವ ಸುಲಭಸುಂದರ || ೨ ||
ಗುರುಸುಧಿಂದ್ರದರ ವಿಮಲ ಕರಜನೆನಿಪರ
ಸ್ಮರಿಸಿ ಸುರುಚಿರ ವಿಮಲಚರಣಪುಷ್ಕರ || ೩ ||
ಫಾಲಲೋಚನ ವಿನುತ ಮೂಲರಾಮನ
ಲೀಲೆಯನುದಿನ ತುತಿಪ ಶೀಲ ಸದ್ಗುಣ || ೪ ||
ಭೂತಭಾವನ ಜಗನ್ನಾಥ ವಿಠ್ಠಲನ
ಪ್ರೀತಿಪಾತ್ರನ ನಂಬಿರೀತನನುದಿನ || ೫ |
Lyrics in English
Pondi badukiro raghavendra rayara || pa ||
Kundademmanu karunadinda porevara || a ||
Nambi tutisuva janakadanbakishtava | Tumbi koduvanu anyarhanbaliyanu || 1 ||
Alavabodhara sumata jaladhichandira | Olidu Baktara kayva sulabasundara || 2 ||
Gurusudhindrara vimala karajanenipara | Smarisi surucira vimalacharanapushkara || 3 ||
Phalalochana vinuta moola ramana | leeleyanudina stutipasheela sadguna ||4||
Bhutabhavana jagannaatha vittalana | preetipatrana nambireetananudina ||5||