
ಪೋಗಾದಿರೆಲೊ ರಂಗ ಬಾಗಿಲಿಂದಾಚೆಗೆ ಪೋಗಾದಿರೆಲೊ ರಂಗ ||ಪ||
ಭಾಗವತರು ಕಂಡು ಭಾಗವತರು ಕಂಡೆತ್ತಿಕೊಂಡೊಯ್ವರು ರಂಗ ||
ಸುರಮುನಿಗಳು ತಮ್ಮ ಹ್ರದಯ ಕಮಲದಲ್ಲಿ
ಪರಮಾತ್ಮನ ಕಾಣದೆ ಅರಸುವರು
ದೊರಕದ ವಸ್ತುವು ದೊರಕಿತು ತಮಗೆಂದು
ಹರುಷಾದಿಂದಲಿ ನಿನ್ನ ಕರದೆತ್ತಿ ಕೊಂಬುವರು ||ಪೋಗಾದಿರೆಲೊ ರಂಗ ||
ಅಗಣಿತ ಗುಣ ನೀನಾ ಜಗದನಾರಿಯರೆಲ್ಲಾ
ಹಗೆಯಾಗಿ ನುಡಿದರು ಗೋಪಾಲನೆ
ಮಗುಗಳ ಮಾಣಿಕ್ಯ ತಗಲೀತು ಕರಕೆಂದು
ವೇಗದಿಂದಲಿ ಬಂದು ಬಿಗಿದಪ್ಪಿಕೊಂಬುವರು ||ಪೋಗಾದಿರೆಲೊ ರಂಗ||
ಧಿಟ್ಟ ನಾರಿಯಾರೆಲ್ಲ ಇಷ್ಟವ ಸಲಿಸೆಂದು
ಅಟ್ಟಟ್ಟಿ ಬೆನ್ನಟ್ಟಿ ತಿರುಗುವಾರೊ
ಸೃಷ್ಟೀಶ ಪುರಂದರ ವಿಠ್ಠಲ ರಾಯನೆ
ಇಷ್ಟಿಷ್ಟು ಬೆಣ್ಣೆಯ ಕೊಟ್ಟೆನೋ ರಂಗಯ್ಯ ||ಪೋಗಾದಿರೆಲೊ ರಂಗ||
ಬಾಗಿಲಿಂದಾಚೆಗೆ ಪೋಗಾದಿರೆಲೊ ರಂಗ
Lyrics in English
Pogadirelo ranga bagilindache |p|
Bagavataru kandu etti kondoyvaru ||a.pa||
Suramunigalu tamma hrudaya gafvara dalli |
paramatmana kandu arasuvaru
dorakada vastuvu dorakitu tamagendu
harushadindali ninna karedetii kombuvaru |1|
Aganitaguna ninna jagada nariyarella
hageyagi nudivaro gopalane
magugala manikya tagulitu karakendu
vegadindali bandu bigidappikombuvaru |2|
Ditta nariyarella ishtava salisendu
attatti bennatti tiruguvaro
shrushtisha purandara vittala rayane
ishtihshtu benneya kotteno rangayya |3|
Youtube like here : sung by S.Janaki https://youtu.be/P7wljxoIF3E
By Dr.Rajkuma : https://youtu.be/RUIqpSC1Doo