
ಸರ್ವ ಮಂಗಳಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣೀ ನಮೋಸ್ತುತೇ
ನಮೋಸ್ತುತೇ ನಮೋಸ್ತುತೇ
ಬಂದಾಳು ಮಹಾಲಕುಮಿ ನಮ್ಮ ಮನೆಗೆ ಬಂದಾಳು ಮಹಾಲಕುಮಿ
ಸಂಜೆಯ ಹೊತ್ತಿನಲ್ಲಿ ಬಂದಾಳು ನಮ್ಮ ಮನೆಗೆ ||ಸಂಜೆಯ||
ನಿಂದಾಳು ಗೃಹದಲ್ಲೀ | ನಂದ ಕಂದನ ರಾಣಿ ವ್ರಂದಾವನದಿಂದ ||ಬಂದಾಳು||
ಹೆಜ್ಜೆಯ ಮೇಲೊಂದ್ಹೆಜ್ಜೆಯನಿಕ್ಕುತ
ಕಾಲ್ಗೆಜ್ಜೆ ಘಲ್ಲೆಂದು ನಾದವ ತೋರುತ ||ಹೆಜ್ಜೆಯ||
ಸಜ್ಜನ ಭಕ್ತರಿಗೇ…| ಸಾಯುಜ್ಯ ಕೊಡುವಂತ |
ಮೂರ್ಜಗದೊಡೆಯನ | ಮುದ್ದು ಮೋಹದ ರಾಣಿ ||ಬಂದಾಳು||
ಶ್ರಾವಣಮಾಸ ಸಂಪತ್ತು ಶುಕ್ರವಾರದ
ಪೌರ್ಣಿಮೆ ದಿವಸದಲಿ | ಭೂಸುರರೆಲ್ಲರೂ…||೨||
ಸಾಸಿರ ನಾಮ ಪಾಡಿ | ವಾಸ ವಾಗಿರಲಿಕ್ಕೆ ||೨||
ವಾಸುದೇವನ ರಾಣಿ ||ವಾಸ|| ||ಬಂದಾಳು||
ಉಟ್ಟ ಪೀತಾಂಬರ ಹೊಳೆಯುತಾ||೨||
ಕರದಲಿ ಘಟ್ಟಿ ಕಂಕಣ ಹಿಡಿಯುತ||೨||
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ||೩||
ಪಟ್ಟದರಸಿ ನಮಗಿಷ್ಟಾರ್ಥ ಕೊಡಲಿಕ್ಕೆ||೨|| ||ಬಂದಾಳು||
Lyrics in English
Sarva Mangala mangalye shive sarvartha sadhike
sharanye traimbake devi Narayana namostute
Bandalu mahalakumi
namma manege bandalu Maha lakumi
sanjeya hottinalli bandalu namma manege ||sanjeya||
nindalu gruhadalli ||2||
nanda kandana rani vrundavanadinda ||bandalu||
Hejjeya melohndejjeyanikkuta kalgejje ghallendu nadava toruta |
sajjana bhaktarige | sayujya koduvantha |
moorjagadodeyana | muddu mohana rani ||bandalu||
Shravana masa sampattu shukravarada |
pournime divasadali | bhusurarellaroo ||
sasira nama padi vasavagiralikke |
vasudevana rani || bandalu||
Utta pitambaravu holeyuta |
karadalli ghatti kankana hidiyuta
srushtigodeya namma purandara vittalana |
pattadarasi namagishtaartha kodalikke ||bandalu||