ಬಲವು ಬಲವೆ ನಿನ್ನ /Balavu balave ninna

ಬಲವು ಬಲವೆ ನಿನ್ನ ಬಲವಲ್ಲದೆ ಮಿಕ್ಕ
ಬಲಗಳುಂಟೆ ಬನಗು ಗ್ರಹಗಳಿಂದ ||

ಹರಿ ನಿನ್ನ ಕೃಪೆ ಎನಗೆ ಚಂದ್ರ ತಾರ ಬಲವು
ಹರಿ ನಿನ್ನ ಕರುಣವೆ ರವಿಯ ಬಲವು
ಹರಿ ನಿನ್ನ ಮೋಹವೇ ಎನಗೆ ಗುರು ಭೃಗು ಬಲವು
ಹರಿ ನಿನ್ನ ಒಲುಮೆಯ ಶನಿಯ ಬಲವು ||

ಮಂಗಳ ಮಹಿಮ ನಿನ್ನ ಅಂಗ ದರುಶನ ಸುಖದ
ಮಂಗಳನ ಬಲವು ಎನ್ನಂಗಗೆ ಸದಾ
ರಂಗ ನಿನ್ನಯ ಚರಣ ಕಂಗಳಲಿ ನೋಡುವುದು
ಹಿಂಗದೆ ಸುಖವನಿವ ಸೌಮ್ಯ ಬಲವಯ್ಯ||

ಆದಿ ಮುರುತಿ ನಿನ್ನನರಿವುದೆ ರಾಹು ಬಲ
ಆದಿ ಮೂಲನೆ ನಿನ್ನ ಗುಣಕಥನವ
ಆಧರಿಸಿ ಕೊಂಡಾಡುತಿಹುದೆನಗೆ ಕೇತು ಬಲ
ಆದಿ ಮಹಿಮನೆ ಮಹಾ ಪುರಂದರ ವಿಠ್ಠಲ ||

Lyrics in English

Composer : Sri Purandara dasaru

Balavu balave ninna balavallade mikka
balagalunte banagu grahagalinda ||

Hari ninna kripeyenage chandra tara balavu
hari ninna karunave raviya balavu
hari ninna mohave enage guru bhrugu balavu
hari ninna olumeya shaniya balavu ||

Mangala mahima ninna anga darushana sukhada
mangalana balavu ennangage sada
ranga ninnaya charana kangalali noduvudu
hingade sukhavaniva saumya balavayya ||

Adi muruti ninnanarivude rahu bala
adi mulane ninna gunakathanava
Adarisi kondadutihudenage ketu bala
adi mahimane maha purandara vittala ||


Leave a Reply