ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ / Baro namma manege gopalakrishna

ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ ||pa||

ಗೊಲ್ಲ ಬಾಲಕರನು ನಿಲ್ಲಿಸಿ ಹೆಗಲೇರಿ
ಗುಲ್ಲು ಮಾಡದೆ ಮೊಸರೆಲ್ಲ ಸವಿದ ಕೃಷ್ಣ ||

ಕಸ್ತೂರಿ ತಿಲಕವ ಶಿಸ್ತಾಗಿ ಫಣೆಯಲಿಟ್ಟು
ಮಸ್ತಾಗಿ ಕುಣಿವ ಪರವಸ್ತು ಕಾಣೇನೆಂದು ||

ಮುಜ್ಜಗವನೆಲ್ಲ ಬೊಜ್ಜೆಯೊಳಗೆಯಿಟ್ಟು
ಗೆಜ್ಜೆಯ ಕಟ್ಟಿ ತಪ್ಪು ಹೆಜ್ಜೆಯನಿಕ್ಕುತ ||

ನಾರಿಯರು ಬಿಚ್ಚಿಟ್ಟ ಸೀರೆಗಳನೊಯ್ದು
ಮೇರೆಯಿಲ್ಲದೆ ಕೈಯ ತೋರೆಂದ ಶ್ರೀ ಕೃಷ್ಣ ||

ಅಂಗನೆಯರ ವ್ರತ ಭಂಗವ ಮಾಡಿದ
ರಂಗ ವಿಟ್ಠಲ ಭವಭಂಗ ಪರಿಹರಿಸೋ ||

Lyrics in English

Baro namma manege gopalakrishna ||pa||

Golla balakaranu niliside hegaleri
gullu māḍade mosarella savida Krishna ||

Kasturi tilakada shistagi phaneyalittu
mastagi kuniva paravastu kanenendu ||

Mujagavanella bojjeyolagittu
gejjeya katti tappu hejjeyanikkuta ||

Nariyara bicchiṭṭu seeregalanoydu
mereyillade kaiya torenda Sri Krishna ||

Anganeyara vruta bhangava madida
Ranga vittala bhavabhanga parihariso ||

Leave a Reply