ಭಳಿರೆ ಭಳಿರೆ ನರಸಿಂಹ ಮಹಾಸಿಂಹ / Bhalire Bhalire Narasimha mahasimha

ಕೃತಿಕಾರರು : ಶ್ರೀ ವಿಜಯದಾಸರು

ಭಳಿರೆ ಭಳಿರೆ ನರಸಿಂಹ ಮಹಾಸಿಂಹ |
ಮಲಮಲಾ ಮಲೆತವರ ವೈರಿ ಉರಿಮಾರಿ ||ಪ||

ನಗನಗ ನಗನಗಗಳಲ್ಲಾಡೆ ಚತುರ್ದಶ |
ಜಗಜಗ ಜಗವೆಲ್ಲ ಕಂಪಿಸಿ ಕಂಬನಾಗೆ ||
ಹಗೆ ಹಗೆ ಹಗೆಬಲವ ದೆಶೆಗೆಡಿಸಿ ರೋಷಗಿಡಿ |
ಉಗು ಉಗು ಉಗುಳುತ್ತ ಬಂದ ನರಸಿಂಹ ||೧||

ಬಿಗಿ ಬಿಗಿ ಬಿಗಿಬಿಗಿದು ಹುಬ್ಬುಗಂಟನೆ ಹಾಕಿ |
ಹೊಗೆ ಹೊಗೆ ಹೊಗೆ ಸುತ್ತಿ ಸರ್ವರಂಜೆ ||
ನೆಗ ನೆಗ ನೆಗ ನೆಗೆದು ಕುಪ್ಪಳಿಸಿ ಅಸುರನ್ನ |
ಮಗು ಮಗು ಮಗು ಬೇಡಿಕೊಂಡ ನರಸಿಂಹ ||೨||

ಉಗು ಉಗು ಉಗುರಿಂದ ಕ್ರೂರನ್ನ ಹೇರೊಡಲ |
ಬಗ ಬಗ ಬಗ ಬಗಿದು ರಕುತವನ್ನು ||
ಉಗಿ ಉಗಿ ಉಗಿ ಉಗಿದು ಚೆಲ್ಲಿ ಕೊರಳಿಗೆ ಕರುಳ |
ತೆಗೆ ತೆಗೆ ತೆಗೆ ತೆಗೆದು ಇಟ್ಟ ನರಸಿಂಹ ||೩||

ಯುಗ ಯುಗ ಯುಗದೊಳಗೆ ಪ್ರಣತಾರ್ತಿ ಹರನೆಂದು |
ಝಗ ಝಗಾ ಝಗಝಗಿಪ ಮಕುಟ ತೂಗೆ ||
ನಗು ನಗು ನಗು ನಗುತ ಸುರರು ಗಗನದಿ ನೆರೆದು |
ಮಿಗಿ ಮಿಗಿ ಮಿಗಿಲೆನೆ ಮೆರೆದ ನರಸಿಂಹ ||೪||

ಒಂದೊಂದೊಂದೊಂದು ಮುನಿಗಳಿಗೊಲಿದು |
ಅಂದಂದಂದಂದೀಗಾಯತ ವೊಲಿದು ||
ಅಂದಂದಂದವ ಕಾವ ಚೋಳಂಗಿರಿ |
ಮಂದಿರನೆ ವಿಜಯವಿಠ್ಠಲ ನರಸಿಂಹ ||೫||

Lyrics in English

Composer : Sri Vijaya Dasaru

Bhalire bhalire Narasimha mahasimha |
malamala maletavara vairi urimari ||pa||

Naganaga naganagagalallade chaturdasha |
jagajaga jagavella kampisi kambanage ||
hagehage hagebalava deshegedisi roshagidi |
ugu ugu ugulutta Banda Narasimha ||1||

Bigi bigi bigibigidu hubbugantane haki |
hoge hoge hoge sutti sarvaranje ||
nega nega nega negedu kuppalisi asuranna |
magu magu magu bedikonda Narasimha ||2||

Ugu ugu ugrinda krooranna herodala |
baga baga baga bagidu rakutavannu ||
ugi ugi ugi ugidu chilli koralige karuna |
tege tege tege tegedu itta Narasimha ||3||

Yuga yuga yugadolage pranatarti haranendu |
jhuga jhuga jhugajhugidu makuta tooge ||
nagu nagu nagu naguta suraru gaganadi neredu |
migi migi migilene mereda Narasimha ||4||

Ondondondondu munigaligolidu |
andandandandeegayuta volidum||
andandandava karava cholangiri |
mandirane vijayavittala Narasimha ||5||


Leave a Reply