ಮಾರುತಿ ಸೇವಕನ ಮಾಡೋ / Maruti Sevakana maado

ಮಾರುತಿ …. ಸೇವಕನ ಮಾಡೋ…. ಮಾರುತಿ ….
ಸೇವಕನ ಮಾಡೋ ನಿನ್ನಂತೆ ನನ್ನ…
ಸೇವಕನ ಮಾಡೋ ರಾಮಚಂದ್ರನ
ಸೇವಿಸಿ ಪೂಜಿಸಿ ರಾಮಚಂದ್ರನ ||

ಧನ್ಯನಾಗುವಂತೆ ಹರಸಿ ನನ್ನ
ಸೇವಕನ ಮಾಡೋ ನಿನ್ನಂತೆ ನನ್ನ …ಮಾರುತಿ .. ।।

ಸೇವಕನಾದರೆ ದೊರೆಯುವ ಪ್ರಭುವಿನ ಕರುಣೆಗೆ ಎಣೆಯೇ ಇಲ್ಲಾ
ಸೇವೆಯು ನೀಡುವ ಮಹದಾನಂದ ಬಣ್ಣಿಸೆ ಮಾತುಗಳಿಲ್ಲಾ
ಸೇವೆಯು ಕೊಡುವ ಫಲದ ಕಲ್ಪನೆ ಕಲ್ಪವೃಕ್ಷಕೂ ಇಲ್ಲಾ
ಸೇವಕನ ಮಾಡೋ ನಿನ್ನಂತೆ ನನ್ನ …
ಸೇವಕನ ಮಾಡೋ ನಿನ್ನಂತೆ ನನ್ನ… ಮಾರುತಿ… ।।

ಸೇವಕನಂದೆ ನಂದಿಗೆ ದೊರಕಿತು ಕೈಲಾಸದಲಿ ಸ್ಥಾನ
ಸೇವಕನಾಗಿ ಗರುಡನು ಪಡೆದ ವೈಕುಂಠದಲಿ ತಾಣ
ಸೇವಕನಾದರೆ ನನ್ನಲಿ ಆಗ ಕರಗುವುದು ಅಜ್ಞಾನ
ಸೇವಕನ ಮಾಡೋ ನಿನ್ನಂತೆ ನನ್ನ …
ಸೇವಕನ ಮಾಡೋ ನಿನ್ನಂತೆ ನನ್ನ… ಮಾರುತಿ. ।।

ಸೇವಕನಾಗಿ ಎಲ್ಲಾ ಶಕ್ತಿಯೂ ನಿನ್ನ ಕೈ ಸೇರಿತು ಹನುಮ
ಪೂಜೆಯ ಹೊಂದುವ ಭಾಗ್ಯ ನೀಡಿತು ನಿನಗಾರಾಮ ನಾಮ
ನನ್ನೀ ಜನುಮವು ಸಾರ್ಥಕ ತಂದೆ ಪಡೆದರೆ ನಿನ್ನಾ ಪ್ರೇಮ ……
ಸೇವಕನ ಮಾಡೋ ನಿನ್ನಂತೆ ನನ್ನ …
ಸೇವಕನ ಮಾಡೋ ನಿನ್ನಂತೆ ನನ್ನ…. ಮಾರುತಿ….

Lyrics in English

Maruti … Sevakana maado …. Maruti …. Sevakana maado ninnante nanna …
Sevakana maado ramachandrana sevisi poojisi ramachandrana ||

Dhanyanaaguvante harasi nanna
sevakana maado ninnante nanna …. Maruti … ||

Sevakanaadare doreyuva prabhuvina karunege eneye ellaa |
seveyu needuva mahadaananda bannise matugalillaa |
seveyu koduva phalada kalpane kalpavrukshaku ellaa |
sevakana maado ninnante nanna … Sevakana maado ninnante nanna … Maruti … ||

Sevakanande nandige dorakitu kailaasadali staana |
sevakanaagi garudanu padeda vaikuntadali taana |
sevakanaadare nannali aga karaguvudu ajnaana |
sevakana maado ninnante nanna … Sevakana maado ninnante nanna … Maruti … ||

Sevakanaagi ellaa shaktiyu ninna kai seritu hanuma |
pujeya honduva bhagya needitu ninagaaraama naama |
nannee janumavu saarthaka tande padedare ninnaa prema …
sevakana maado ninnante nanna … Sevakana maado ninnante nanna … Maruti … ||


Leave a Reply