
ರಚನೆ : ಶ್ರೀ ಪುರಂದರದಾಸರು
ಮುದ್ದು ತಾರೋ ರಂಗ ಎದ್ದು ಬಾರೋ ||ಪ||
ಅಂದವಾದ ಕರ್ಪೂರದ ಕರಡಿಕೇಯ ಬಾಯೊಳೊಮ್ಮೆ ||ಅಪ||
ವಿಷವನುಣಿಸಲು ಬಂದ ಅಸುರೆ ಪೂತನಿಯ ಕೊಂದ |
ವಶವನಲ್ಲ ಮಗನೆ ನಿನ್ನ ವಿಷವನುಂಡ ಬಾಯೊಳೊಮ್ಮೆ ||೧||
ಕಡೆದ ಸಮಯದಿ ಬಂದು ಕಡೆವ ಸತಿಯ ಕರವ ಪಿಡಿದು |
ಕಡೆದ ಬೆಣ್ಣೆ ಮೊಸರನ್ನೆಲ್ಲಾ ಒಡನೆ ಮೆದ್ದ ಬಾಯೊಳೊಮ್ಮೆ ||೨||
ತೊರವೆಯ ನಾರಸಿಂಹ ವರದ ಶ್ರೀ ಪುರಂದರ ವಿಠಲ ಹರವಿ
ಹಾಲನ್ನೆಲ್ಲ ಕುಡಿದ ನೊರೆ ಹಾಲಿನ ಬಾಯೊಳೊಮ್ಮ ||೩||
Lyrics in English
Muddu taro ranga eddu baro ||pa ||
Andavaada karpoorada karadikeya bayolomme ||a.pa||
Vishavanunisalu Banda asure putaniya konda |
vashavanalla magane ninna vishavanunda bayolomme ||1||
Kadeda samayadi bandu kadeva satiya karava pididu |
kadeda benne mosaranella odane medda bayolomme ||2||
Toreveya narasimha varada sri purandara vittala |
haravi halamella kudida nore halina bayolomma ||3||