ಮೂಲ ರಾಮನ ದಿವ್ಯ ಮೂರ್ತಿ ಅರ್ಚಿಸಲೆನ್ನ / Moola Ramana divya moorthi

ಮೂಲರಾಮನ ದಿವ್ಯ ಮೂರ್ತಿ
ಅರ್ಚಿಸಲೆನ್ನ ಮೇಲು ಮೇಲೆಂಬೆನಯ್ಯಾ… || ಮೂಲರಾಮನ ||
ಶೀಲದಿಂದಿಳೆಯಲ್ಲಿ ಶಿವನು
ಹೊಸಲು ಪೂರ್ವ|| ಶೀಲ ||
ಶಿಷ್ಟಾರ್ಚನೆ ಮಾಡಿದ||2||
ಶಿಷ್ಟಾರ್ಚನೆ ಮಾಡಿದಾ… ಚೆಲುವಾ..       || ಮೂಲರಾಮನ ||

ಆದಿಯಲ್ಲಿ ಅಜನಾದ ಇಂದ್ರ ನೀ ದೇವರ
ಪಡಿಯಾದರದಿ ನಿರ್ಮಿಸಿದ ವೇದಗರ್ಭನು
ದೇಹದಲ್ಲಿ  ಭಕುತಿ ಯೋಗದಿಂದರ್ಚಿಸಿದಾ… ||2||
ಮೋದದಿಂದಿಕ್ವಾಕ್ಷು ರಾಯನರ್ಚಿಸಲವಗೆ
ಮೋಕ್ಷವನೆ ಪಾಲಿಸಿದ || ಮೋದ ||
ಮೇಧಿನಿ ಪತಿಗಳಲ್ಲಿ ಅಮಿತ ವೈಭವದಿಂದ ಮೆರೆದ
ಸಂತೋಷದ ಚೆಲುವಾ….||2||    || ಮೂಲರಾಮನ ||

ದಾಶರಥಿ ಜಾಂಬವಂತಗೆ ಹರುಷದಿ ಕೊಡಲು
ದಾಸನೆಂದವನ ಪೊರೆದ || 2 ||
ಕೋಶದೊಳು ಗಜಪತಿಗಳನು ಅರಸಿ ನರಹರಿ
ಮುನಿಯು ಕೊಂಡು ಬರಲು ಅಂದು ಮೆರೆದ || 2 ||
ದೇಶಿಕಾನಂದ ತೀರ್ಥಾರ್ಯಾರ್ಚಿಸಿ ತಮ್ಮ
ದೇವರೆಂದಾಗ ಕರೆದು || ದೇಶಿ ||
ಈಶನೆಂದಿವನ ಕಾಲ ಯೋಗಿಗಳಿಂದರ್ಚಿಸಲು
ಅವರ ಅಭೀಷ್ಟಗಳಾ…ತಂದು ಸುರಿದ ಚೆಲುವ
ಅಭೀಷ್ಟಗಳ ತಂದು ಸುರಿದ ಚೆಲುವ
ತಂದು ಸುರಿದ ಚೆಲುವ ಅಭೀಷ್ಟಗಳ || 2 ||  || ಮೂಲರಾಮನ ||

ವಿನುತ ವಿಭುದೇಂದ್ರವಂಶಾಭ್ಧಿಪೂರ್ಣವಿದು
ಬಿಂಬನೆನಿಸುತಿಹಾ..
ಅನುದಿನವು ಸನ್ನುತೋ ಉಪೇಂದ್ರರಾಯರ
ಮತವನನುಸರಿಸಿ ನಡೆಯುತ್ತಿಹ || ವಿನುತ ||
ಘನಭಕುತವಾಗೀಂದ್ರ ಯತಿ ಮನೋರತವನೂ…ಆ…ಆ.. || ಘನ ||
ಘಟನೆಯನು ಮಾಡುತಿಹ ಚೆಲುವ || 3 ||    || ಮೂಲರಾಮನ ||

Lyrics in English

Moolaramana divya moorthi
archisalenna melu melemenayya ….
sheeladindileyalli shivanu
hosalu poorva ||
shishtarchane maḍida |
shishtarchane maḍida cheluva ….. || Moola Ramana ||

Aadiyalli ajanada indra nee devara
padiyadaradi nirmisida vedagarbhanu
dehadalli bhakuti yogadindarchisida …
modadindikwakshu rayanarchisalavage
mokshavane palisida ||
medhini patigalalli Amita vaibhavadinda mereda
santoshada cheluva …. || Moolaramana ||

Dasharatha jambavantage harushadi kodalu
dassanendavana poreva |
koshadolu ganapatigalanu arasi narahari
muniyu kondu barali andu mereda ||
deshikanandateerthaarchisi tamma
devarendaga karedu ||
eeshanendivana kala yogigalindarchisalu
varada abhishtagala tandu surida cheluva
abhishtagala tandu surida cheluva
andu surida cheluva abhishtagala || moolaramana ||

Vinute vibhudendravamshabdhipoornavidu
bimbanenisutiha ….
anudinavu sannute upendra rayara
matavananusarisi nadeyuttiha ||
ghanabhakuta vagindra yati manoratavanoo .. aa … a ..||
ghataneyanu madutiha cheluva || moolaramana ||

Leave a Reply