ಯಮನೆಲ್ಲೂ ಕಾಣೆನೆಂದು ಹೇಳಬೇಡ / Yamanello kanenendu helabeda

ಆನೆಯು ಕರೆದರೆ ಆದಿಮೂಲ ಬಂದಂತೆ | ಅಜಾಮಿಳನು ಕರೆದರೆ ನಾರಾಯಣನು ಬಂದಂತೆ |
ಅಡವಿಯಲ್ಲಿ ಧ್ರುವರಾಯ ಕರೆದರೆ ವಾಸುದೇವ ಬಂದಂತೆ |
ಸಭೆಯಲ್ಲಿ ದ್ರೌಪದಿ ಕರೆದರೆ ಶ್ರೀಕೃಷ್ಣ ಬಂದಂತೆ | ನಿನ್ನ ದಾಸರ ದಾಸನು ನಾ ಕರೆದರೆ ಬಂದು |
ಎನ್ನ ಪಾಲಿಸಬೇಕು ಪುರಂದರ ವಿಠಲ |

ಯಮನೆಲ್ಲೂ ಕಾಣೆನೆಂದು ಹೇಳಬೇಡ
ಯಮನೇ ಶ್ರೀ ರಾಮನು ಸಂದೇಹ ಬೇಡ || ಪ ||
ನಂಬಿದ ವಿಭೀಷಣಗೆ ರಾಮನಾದ
ನಂಬದಿದ್ದ ರಾವಣಗೆ ಯಮನಾದ || ಎ. ಪ ||

ನಂಬಿದ ಅರ್ಜುನಗೆ ಮಿತ್ರನಾದ
ನಂಬದಿದ್ದ ದುರ್ಯೋಧನನಿಗೆ ಶತ್ರುವಾದ |
ನಂಬಿದ ಪ್ರಹ್ಲಾದನಿಗೆ ಹರಿಯಾದ
ನಂಬದಿದ್ದ ಹಿರಣ್ಯನಿಗೆ ಅರಿಯಾದ || ೧ ||

ನಂಬಿದ ಉಗ್ರಸೇನಗೆ ಭೃತ್ಯನಾದ
ನಂಬದಿದ್ದ ಕಂಸನಿಗೆ ಮೃತ್ಯುವಾದ |
ನಂಬಿಕೊಳ್ಳಿ ಬೇಗ ಶ್ರೀ ಕೃಷ್ಣದೇವನ
ಕಂಬು ಚಕ್ರಧಾರಿ ಶ್ರೀ ಪುರಂದರ ವಿಠಲ

Lyrics in English

Aaneyu karedare aadimoola bandante | ajamilanu karedare narayananu bandante |
adaviyalli dhruvaraya karedare vasudeva bandante |
sabheyalli droupadi karedare srikrishna bandante | Ninna dasara dasanu naa karedare bandu | Enna palisabeku purandara vittala |

Yamanello kanenendu helabeda |
yamane Sri ramanu sandeha beda ||pa||

Nambida vibhishanage ramanana
nambadidda ravanage yamanada ||a.pa||

Nambida arjunage mitranada
nambadidda duryodhananige shatruvada |
NAmbida prahladanige hariyada
nambadidda hiranyanige ariyada ||1||

Nambida ugrasenage bhrutyanada
nambadidda kamsanige mrutyuvada |
nambikolli bega Sri Krishna devana
kambu chakradhari Sri purandara vittalana ||

Leave a Reply