ರಂಗ ಕುಣಿದ ಗೋಪಿ ಕಂಗಳ /Ranga kunida gopi

ರಂಗ ಕುಣಿದ ಗೋಪಿ ಕಂಗಳ ಮುಂದೆ ಪೊಂಗೆಜ್ಜೆ ರವದೊಳು ಅಂಗಳದೊಳು|| 1||

ಗೆಳೆಯರೆಂದೆನಿಸುವ ಎಳೆಮಕ್ಕಳೊಡಗೂಡಿ ಬಳುಕುತ ಬಾಗುತ ನಲಿನಲಿದಾಡಿ || 2||

ಮೊಳೆವಲ್ಲು ಬಾಯಿಜೊಲ್ಲು ಗಿಳಿಸೊಲ್ಲಿನಿಂದಲಿ ಕಳಕಳಿಸಿ ನಕ್ಕು ನಗಿಸಿ ಬಿದ್ದೆದ್ದು || 3||

ಸುಳಿಗುರುಳು ಪಣೆಯಲಿ ಒಲಿದಾಡಲು ಬಲರಾಮ ತಿದ್ದಿದರಳುತ ಅಳುಕುತ ||4||

ಅರಳೆಲೆ ಮಾಗಾಯಿ ಬೆರಳ ರನ್ನುಂಗುರ ಕಿರುಗೆಜ್ಜೆ ಭಾರೆಂದು ತರಳರಿಗಿತ್ತು || 5||

ಮಕ್ಕಳ ರತುನ ಶ್ರೀ ಚಿಕ್ಕಕೃಷ್ಣಯ್ಯನು ಬೆಕ್ಕಿಗೆ ಬೆದರ್ಯೆವೆ ಇಕ್ಕದೆ ನೋಡಿ || 6||

ನಗುತತಿ ಮುದ್ದಿಸಿ ಬಿಗಿದಪ್ಪಲೆಶೋದೆಯ ಮಗ ಪ್ರಸನ್ವೆಂಕಟೇಶ ಚಿಗಿದುಡಿಯಲ್ಲಿ || 7||

Lyrics in English

Ranga kunida gopi kangala munde pongejje ravadolu angaladolu ||

Geleyarendenisuva ele makkalodagoodi balukuta baaguta nalinalidadi ||2||

Molevallu baayijollu gilisollinindali kalakalisi nakku nagisi biddeddu ||3||

Suligurulu paneyali olidaadalu balarama tiddidaraluta alukuta ||4||

Aralele maagaayi berala rannungura kirugejje bhaarendu taralarigittu ||5||

Makkala ratuna sri chikka krishnayyanu bekkige bedaryeve ekkade nodi ||6||

Nagutati muddisi bigidappaleshodeya maga prasanna venkatesha chigidudiyali ||7||


Leave a Reply