
ರಂಗ ಬಂದ ಬೃಂದಾವನದಲಿ ನಿಂದ ಕೊಳಲಿನ ಧ್ವನಿ ಬಲು ಚಂದ |
ನಂದಗೋಪಿಯರ ಕಂದ ಮುಕುಂದ ಸುಂದರಿಯರ ಆನಂದ ಗೋವಿಂದ ll ರಂಗ ಬಂದ ll
ಮಂದ ಗಮನೇರ ಕೂಡಿ ಸರಸವನಾಡುತ್ತಾ ಇಂದಿರೆಯರಸ ನಗುತಾ ಕೊಳಲನ್ನುದುತ್ತ |
ಎಂದೆಂದಿಗೂ ತನ್ನ ನಂಬಿದ ಭಕುತರ |
ಬಂಧು ಪೊರೆವ ಗೋವಿಂದ ಮುಕುಂದ
ರಂಗ ಬಂದ ಬೃಂದಾವನದಲಿ ನಿಂದ ಕೊಳಲಿನ ಧ್ವನಿ ಬಲು ಚಂದ…
ಉದದಿ ಸಂಚಾರ ಗುಣಗಂಭೀರ ನವನೀತ |
ದದಿ ಭಾಂಡ ಚೋರ ರುಕ್ಮಿಣಿ ಮನೋಹರ |
ಮದನ ಗೋಪಾಲನು ಭಜಿಸುವ ಭಕುತರ
ಹೃದಯದೊಳಗೆ ನಿಂದು ಮುದ ವನು ಕೊಡುವ… ||
ರಂಗ ಬಂದ ಬೃಂದಾವನದಲಿ ನಿಂದ ಕೊಳಲಿನ ಧ್ವನಿ ಬಲು ಚಂದ…
ಮಧುರೆಯಿಂದಲಿ ಬಂದ ಮಾವನ್ನ ಕೊಂದ ಕಡಗೋಲ ಕೈಲಿ ಪಿಡಿದ ದ್ವಾರಕ ವಾಸ….|
ಹಡಗಿನಿಂದಲಿ ಬಂದು ಉಡುಪಿಲಿ ನೆಲೆಸುತ
ಬಿಡದೆ ಪೂಜೆಗೊಂಬ ಒಡೆಯ ಶ್ರೀ ಕೃಷ್ಣll
ರಂಗ ಬಂದ ಬೃಂದಾವನದಲಿ ನಿಂದ ಕೊಳಲಿನ ಧ್ವನಿ ಬಲು ಚಂದ ll
Lyrics in English
Ranga Banda brundavanadali ninda kolalina dhwani balu chenda |
Nanda gopiyara kandamukunda sundariyara Ananda Govinda ||
Mandagamanera koodi sarasavanadutta indireyarasa naguta kolalannuduta |
endendigu tanna nambida bhakutara |
bandhu poreva Govinda mukunda ||
Ranga Banda brundavanadali ninda kolalina dhwani balu chenda ||
Udadi sanchara gunagambhira navanita |
dadi bhanda chora rukmini manohara |
madana gopalanu bhajisuva bhakutara
hrudayadolage nindu mudavanu koduva ||
Ranga Banda brundavanadali ninda kolalina dhwani balu chenda
Madhureyindali Banda mavanna konda kadagola kaili pidida dwaraka vasa …. |
Hadaginindali bandu udupili nelesuta
bidade poojegomba odeya Sri Krishna||
Ranga Banda brundavanadali ninda kolalina dhwani balu chenda