ರಾಘವೇಂದ್ರ ತೀರ್ಥನೀತ ರಾಜಿಸುವಾತ / Raghavendra teerthaneeta rarajisuvaata

ರಾಘವೇಂದ್ರ ತೀರ್ಥನೀತ ರಾಜಿಸುವಾತ     || ಪ ||
ಪಾಪೌಘಗಳೆಲ್ಲವ ನೋಡಿಸಿ ಪುಣ್ಯಗಳೀವಾತಾ  || ಅ ||

ಬಣ್ಣ ಬಣ್ಣದಿಂದ ಬಹಳ ಬೋಧಿಸುವಾತ – ಬಹಳ
ಸಣ್ಣ ದೊಡ್ಡಭೀಷ್ಟಗಳ ಸಾಧಿಸುವಾತಾ
ಪುಣ್ಯವಂತರಿಂದ ಬಹು ಪೂಜೆಗೊಂಬಾತ – ನಮಗೆ
ಕಣ್ಣ ಹಬ್ಬವಾಗುವಂತೆ ಕಾಣಿಸುವಾತಾ    || ೧ ||

ಕಾಮಕ್ರೋಧಾದಿಗಳನೆ ಕಾಲಲೊದ್ದಾತ – ಈತ
ವ್ಯೋಮಕೇಶನಂತೆ ನಾಲ್ಕು ವೇದ ಪ್ರಖ್ಯಾತಾ
ಭೂಮಿಯೊಳು ದುರ್ವಾದಿಗಳನೆ ಭೂರಿ ಗೆದ್ದಾತ – ಪ್ರೌಢ
ಶ್ರೀಮಧ್ವಯೋಗೀಂದ್ರತೀರ್ಥ ಶಿಷ್ಯನೆಂಬಾತಾ   || ೨ ||

ಸಿಧ್ಧವಿದ್ಯೆಗಳಲಿ ಬಹು ಪ್ರಸಿಧ್ಧನಾದಾತಾ – ನಮ್ಮ
ಮಧ್ವಶಾಸ್ತ್ರಗಳನೆ ಮಾಡಿಕೊಟ್ಟಾತ
ಮಧ್ವೇಶವಿಠ್ಠಲನ ಧ್ಯಾನದಲಿದ್ದಾತ – ತುಂಗ
ಭದ್ರತೀರದಲ್ಲಿ ತಾನು ವಾಸವಾದಾತ     || ೩ ||

Lyrics in English

Ragavendra tirthanita rajisuvata || pa ||

Papaugagalellava nodisi punyagalivata || a ||

Banna bannadimda bahala bodhisuvata – bahala
Sanna doddabishtagala sadhisuvata
Punyavamtarimda bahu pujegombata – namage
Kanna habbavaguvamte kanisuvata || 1 ||

Kamakrodhadigalane kalaloddata – Ita
Vyomakesanamte nalku veda prakyata
Bumiyolu durvadigalane buri geddata – praudha
Srimadhvayogimdratirtha sishyanembata || 2 ||

Sidhdhavidyegalali bahu prasidhdhanadata – namma
Madhvasastragalane madikottata
Madhvesaviththalana dhyanadaliddata – tunga
Badratiradalli tanu vasavadata || 3 ||

Leave a Reply