
ರಾಮ ರಾಮ ರಾಮ ಎನ್ನಿರೋ ಇಂಥ ಸ್ವಾಮಿಯ
ನಾಮವ ಮರೆಯದಿರೊ ||
||ರಾಮ ರಾಮ||
ತುಂಬಿದ ಪಟ್ಟಣಕ್ಕೆ ಒಂಭತ್ತು ಬಾಗಿಲು
ಸಂಭ್ರಮದರಸರು ಐದು ಮಂದಿ |
ಢಂಬಕತನದಿಂದ ತಿರುಗುವ ಕಾಯದಿ
ನಂಬಿ ನೆಚ್ಚಿ ನೀವು ಕೆಡಬೇಡಿರೊ
||ರಾಮ ರಾಮ||
ನೆಲೆಯಿಲ್ಲದೀಕಾಯ ಎಲುಬಿನ ಪಂಜರ
ಹೊಲಿದು ಸುತ್ತಿದ ಚರ್ಮದ ಹೊದಿಕೆ ||
ಮಲಮೂತ್ರಂಗಳು ಕೀವು ಕ್ರಿಮಿಗಳಿಂದ
ಭರಿತ ದೇಹವನೆಚ್ಚಿ ಕೆಡಬೇಡಿರೊ
||ರಾಮ ರಾಮ||
ಹರಬ್ರಹ್ಮ ಸುರರಿಂದ ವಂದಿತನಾಗಿರ್ಪ
ಹರಿಸರ್ವೋತ್ತಮನೊಬ್ಬ ಕಾಣಿರೊ ||
ಪುರಂದರ ವಿಠಲನ ಭಜನೆಯ ಮಾಡಿರೊ
ದುರಿತ ಪರ್ವತವೆಲ್ಲ ಪರಿಹಾರವೊ
||ರಾಮ ರಾಮ||
Lyrics in English
Rama rama rama enniro intha swamiya naamava mareyadiro || rama rama ||
Tumbida pattanakke ombattu baagilu sambhramadarasaru idu mandi | dhamkatanadinda tiruguva kaayadi, nambi necchi neevu kedabediro || rama rama ||
Neleyilladeekaaya elubina panjara holidu suttida charmada hodike | mala mutrangalu keevu krimigalinda bharita dehavanecchi kedabediro || rama rama ||
Harabrahma surarinda vanditanaagirpa hari sarvottamanobba kaaniro | purandara vittalana bhajaneya maadiro durita parvatavella parihaaravo || rama rama ||
Very nice 👍🙂