
ಶ್ರೀ ವಾದಿರಾಜ ತೀರ್ಥರ ಕೃತಿ
ಲಕ್ಷುಮಿ ನಾರಾಯಣ ಜಯ ಲಕ್ಷುಮಿ ನಾರಾಯಣ ||
ಕಂಡೆ ಕಂಡೆನು ಕೃಷ್ಣ ನಿನ್ನಯ ದಿವ್ಯಮಂಗಳ ವಿಗ್ರಹ |
ಕಂಡು ಬದುಕಿದೆ ಇಂದು ನಾನು ಕರುಣಿಸೊ ಎನ್ನೊಡೆಯನೆ || ಪ ||
ಉಟ್ಟ ದಟ್ಟಿಯು ಪಿಡಿದ ವಂಕಿಯು | ತೊಟ್ಟ ಕೌಸ್ತುಭ ಭೂಷಣ |
ಮೆಟ್ಟಿದ ನವರತ್ನದ್ಹಾವಿಗೆ | ಇಟ್ಟ ಕಸ್ತೂರಿ ತಿಲಕವು || ೧ ||
ಮಂದಹಾಸವು ದಂತಪಂಕ್ತಿಯು | ಚಂದದ ಕಡೆಗಣ್ಣ ನೋಟವು |
ಅಂದವಾದ ಕುರುಳುಗೂದಲು | ಮುದ್ದು ಸುರಿವೊ ಮುಖವನ || ೨ ||
ಮಲ್ಲೆ ಮಲ್ಲಿಗೆ ದಂಡೆಕೊರಳಲಿ | ಚೆಲ್ವ ಕಂಕಣ ಕೈಯಲಿ |
ಗೊಲ್ಲಸತಿಯರ ಕುಚಗಳಲ್ಲಿ | ಅಲ್ಲಳಿ ಮಾಡಿ ನಗುವನ|| ೩ ||
ಸುರರು ಪುಷ್ಪದ ವೃಷ್ಟಿ ಕರೆಯಲು ಅ |ಸುರರೆಲ್ಲರು ಓಡಲು |
ಕ್ರೂರಾ ಕಾಳಿಯ ಫಣಗಳಲ್ಲಿ | ಧೀರ ಕುಣಿಕುಣಿದಾಡಿದ || ೪ ||
ಇನ್ನು ಎನ್ನ ಬಂಧನ ತೀರಿತು ಇನ್ನು ಎನ್ನ ಕ್ಲೇಶವು ಹೋಯಿತು
ಇನ್ನು ಅನ್ಯರ ಭಜಿಸಲ್ಯಾಕೆ ಮನ್ನಿಸೊ ಹಯವದನನೆ || ೫ ||
Lyrics in English
Lakshmi Narayana Jaya Lakshmi Narayana ||
Kande kandenu krishna ninnaya Divya mangala vigraha |
kandu badukide Indu nanu karuniso ennideyane ||
Utta dattiyu pidida vankiyu totta koustubha bhushana |
mettida navaratnadhavige itta kasturi tilakavu ||1||
Mandahasavu dantapanktiyu chandada kadeganna notavu |
andavada kurulugoodalu muddu surivo mukhavanu ||
Malle mallige dande koralali chelva kankana kaiyali |
golla satiyara kuchagalli allali Maadi naguvana ||
Surara pushpada vruashti kareyalu asurarellaru odalu |
kroora kaliya phanagalalli dheera kunikunidadida ||
Innu enna bandhana teeritu innu enna kleshavu hoyitu |
innu anyara bhajisalyake manniso hayavadanane ||