
ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ ||2||
ಅರ್ತಿಯಿಂದ ಹರಿಯ ನಾಮ
ನಿತ್ಯ ಸ್ಮರಿಸದವನ ಜನ್ಮ||ಅರ್ತಿ|| ||ವ್ಯರ್ಥವಲ್ಲವೆ||
ಹರಿಯ ಸೇವೆ ಮಾಡದವನ
ಹರಿಯ ಗುಣಗಳೆಣಿಸದವನ||ಹರಿಯ||
ಹರಿಯ ಕೊಂಡಾಡದವನ
ಹರಿಯ ತಿಳಿಯದವನ ಜನ್ಮ ||ವ್ಯರ್ಥವಲ್ಲವೆ||
ದಾಸರೊಡನೆ ಆಡದವನ
ದಾಸರೊಡನೆ ಪಾಡದವನ||ದಾಸ||
ದಾಸರ ಕೊಂಡಾಡದೆ
ಹರಿದಾಸನಾಗದವನ ಜನ್ಮ ||ವ್ಯರ್ಥವಲ್ಲವೆ||
ಒಂದು ಶಂಖ ಉದಕ ತಂದು
ಚಂದದಿಂದ ಹರಿಗರ್ಪಿಸಿ||ಒಂದು||
ತಂದೆ ಪುರಂದರವಿಠ್ಠಲನ
ಹೊಂದಿ ನೆನೆಯದವನ ಜನ್ಮ ||ವ್ಯರ್ಥವಲ್ಲವೆ||
Lyrics in English
vyarthavallave janma vyarthavallave l
arthiyinda hariya nama nitya smarisadavara janma ll
hariya seve madadavana hariya gunagala enisadavana l
hariya kondadadavana hariya tiliyadavana janma ll
dasarodane adadavana dasarodane padadavana l
dasara kondadade hari dasanagadavana janma ll
ondu shanka udaka tandu chandadinda harigarpisi l
tande purandara vittalana pondi neneyadavana janma ll
Yourtube link :