ಶರಣಮಪ್ಪ ಶರಣಮಪ್ಪ ಸ್ವಾಮಿಯೇ / sharanamappa sharanamappa swamiye

ಶರಣಮಪ್ಪ ಶರಣಮಪ್ಪ
ಶರಣಮಪ್ಪ ಸ್ವಾಮಿಯೇ ||ಶರಣಮಪ್ಪ||

ಅ ಶಿವನ ಕೇಶವನ ಅಪರೂಪದ ಸುತನಾಗಿ
ಭುವಿಗಿಳಿದು ಬಂದವನೆ ಶರಣಮಯ್ಯಪ್ಪ ||
ಶರಣಮಯ್ಯಪ್ಪ ಸ್ವಾಮಿ ಶರಣಮಯ್ಯಪ್ಪ||2||

ಬಾಳಿನಲ್ಲಿ ನೊಂದವರ ನಿನ್ನ ನಂಬಿ
ಬಂದವರ ಬವಣೆ ನೀನೆ ನೀಗಬೇಕು ಅಯ್ಯಪ್ಪ
ನಮ್ಮ ಬವಣೆ ನೀನೆ ನೀಗಬೇಕು ಅಯ್ಯಪ್ಪ
ಕರುಣಾಮಯ ನೀನೆಂದು ಶರಣೆನ್ನುತ
ನಾ ಬಂದು ಕೈ ಮುಗಿದು ನಾ ನಿಂದೆ ಅಯ್ಯಪ್ಪ
ನನ್ನ ಸಲಹಬೇಕು ನೀನೆಂದೆ ಅಯ್ಯಪ್ಪ
ಶರಣಮಯ್ಯಪ್ಪ ಸ್ವಾಮಿ ಶರಣಮಯ್ಯಪ್ಪ ||2||

ಕೂಗಿ ನಿನ್ನ ಕರೆಯುತಲಿ
ಬಾಗಿ ಶಿರವ ನಮಿಸುತಲಿ
ಕಾಡಿನಲ್ಲಿ ನಡೆದು ಬಂದೆ ಅಯ್ಯಪ್ಪ
ಈ ಕಾಡಿನಲ್ಲಿ ನಡೆದು ಬಂದೆ ಅಯ್ಯಪ್ಪಾ
ಧ್ಯಾನ ಯೋಗದಲ್ಲಿ ನೀನು
ಮೌನವಾಗಿ ಕುಳಿತಿರಲು
ಏನು ನ್ಯಾಯ ಯಾವ ಧರ್ಮ ಅಯ್ಯಪ್ಪಾ
ದೀನ ಮಾನವರಿಗೆ ಯಾವ ದಾರಿ ಅಯ್ಯಪ್ಪಾ
ಶರಣಮಯ್ಯಪ್ಪ ಸ್ವಾಮಿ ಶರಣಮಯ್ಯಪ್ಪ ||2||

ರಾಜಭೋಗದ ದಾಹ
ರಾಣಿಯರ ವ್ಯಾಮೋಹ ತೊರೆದು ಬಂದ
ತ್ಯಾಗಿ ನೀನು ಅಯ್ಯಪ್ಪಾ
ಭಕ್ತರ ಪೊರೆದು ಮೆರೆದು ಬರುವ
ದೈವ ನೀನು ಅಯ್ಯಪ್ಪಾ
ಆಸೆ ತೊರೆದು ಬಂದ
ನಿನ್ನ ದಾಸರನ್ನು ಕಂಡು ನೀನು
ಆಸರೆಯ ನೀಡಬೇಕು ಅಯ್ಯಪ್ಪಾ
ಪಯನದ ಬೇಸರವನು ನೀಗಬೇಕು ಅಯ್ಯಪ್ಪಾ    ||ಅ ಶಿವನ||

ಚಿಂತೆ ದೂರ ಹೋಗುವುದು
ಚಿತ್ತ ಶಾಂತಿ ಲಭಿಸುವುದು
ನಿನ್ನ ಧ್ಯಾನ ಮಾಡುತಿರಲು ಅಯ್ಯಪ್ಪಾ
ಸ್ವಾಮಿ ನಿನ್ನ ಧ್ಯಾನ ಮಾಡುತಿರಲು ಅಯ್ಯಪ್ಪಾ
ಪಾಪವೆಲ್ಲ ಅಳಿಸುವುದು
ಕೋಪ ಶಮನಗೊಳಿಸುವುದು||ಪಾಪ||
ನಿನ್ನ ವದನ ನೋಡುತಿರಲು ಅಯ್ಯಪ್ಪಾ
ಸ್ವಾಮಿ ನಿನ್ನ ಭಜನೆ ಮಾಡುತಿರಲು ಅಯ್ಯಪ್ಪಾ  ||ಅ ಶಿವನ||

Lyrics in English

Sharanamappa sharanamappa
sharanamappa swamiye || sharanamappa||

Aa shivana keshavana aparoopada sutanagi
bhuvigilidu bandavane sharanamayyappa
sharanamayyappa swami sharanamayyappa ||

Balinalli nondavara Ninna nambi
bandavara bavaṇe neene neegabeku ayyappa
namma bavaṇe neene neegabeku ayyappa
karunamaya neenendu sharanennuta
naa bandu kai mugidu naa Ninde ayyappa
nanna salahabeku neenendu ayyappa
sharaṇamayyappa swami sharaṇamayyappa ||

Koogi Ninna kareyutali baagi shirava namisutali
kaḍinalli nadedu bande ayyappa
ee kaḍinalli nadedu bande ayyappa
dhyana yogadalli neenu
enu nyaya yaava dharma ayyappa
deena manavarige yaava Dari ayyappa
sharanamayyappa swami sharanamayyappa ||

Rajabhogada daha
raṇiyara vyamoha to reduce banda
tyagi neenu ayyappa
bhaktara poredu meredu baruva
daiva neenu ayyappa
aase to reduce banda
Ninna dasarannu kandu neenu
aasareya needabeku ayyappa
payanada besaravanu neegabeku ayyappa ||

Chinte doors hoguvudu
chitta shānti labhisuvudu
Ninna dhyana māḍutiralu ayyappa
papavella alisuvudu
kopa shamanagolisuvudu
Ninna vadavna nodutiralu ayyappa
swami Ninna bhajane māḍutiralu ayyappa ||

Leave a Reply