
ಶರಣು ಬೆನಕನೆ ಕನಕರೂಪನೆ ಕಾಮಿನಿ ಸಂಗದೂರನೇ
ಶರಣು ಸಾಂಬನ ಪ್ರೀತಿ ಪುತ್ರನೆ ಶರಣು ಜನರಿಗೆ ಮಿತ್ರನೆ||ಪ||
ಏಕದಂತನೆ ಲೋಕಖ್ಯಾತನೆ ಏಕವಾಕ್ಯ ಪ್ರವೀಣನೇ
ಏಕವಿಂಶತಿ ಪತ್ರಪೂಜಿತನೇಕ ವಿಘ್ನ ವಿನಾಯಕ ||೧||
ಲಂಬಕರ್ಣನೆ ನಾಸಿಕಾಧರನೆ ಗಾಂಭೀರ್ಯಯುತ ಗುಣಸಾರನೇ
ಕಂಬುಕಂಧರ ಇಂದುಮೌಳಿಜ ಚಂದನಚರ್ಚಿತಾಂಗನೇ ||೨||
ಚತುರ್ಬಾಹು ಚರಣ ತೊಡಲನೆ ಚತುರ ಆಯುಧಧಾರನೇ
ಮತಿಯವಂತನೆ ಮಲಿನ ಜಲಿತನೆ ಅತಿಯ ಮಧುರಾಹಾರನೇ||೩||
ವಕ್ರತುಂಡನೆ ಮಹಾಕಾಯನೆ ಅರ್ಕಕೋಟಿ ಪ್ರದೀಪನೇ
ಚಕ್ರಧರ ಹರಬ್ರಹ್ಮ ಪೂಜಿತ ರಕ್ತ ವಸ್ತ್ರಾಧಾರನೇ ||೪||
ಮೂಷಿಕಾಸನ ಶೇಷಭೂಷಣ ಅಶೇಷ ವಿಘ್ನವಿನಾಯಕ
ದಾಸ ಪುರಂದರವಿಠ್ಠಲೇಶನ ಈಶ ಗುಣಗಳ ಪೊಗಳುವೆ ||೫||
Lyrics in English
Sharanu benakane kanakaroopane kamini sangadoorane |||pa||
Ekadantane lokakhyatane ekavakya pravinane| ekavimshati patrapoojitaneka vjghna vinayaka ||1||
Lambakarnane nasikadharane gaambhiryayuta gunasarane || kambukandhara indumoulija chandanacharchitaangane ||2||
Chaturbahu charana todalane chatura ayudhadharane | matiyavantane malina jalitane atiya madhuraharane ||3||
Vakratundane mahaakaayane arkakoti pradeepane| chakradhara harabramha poojita rakta vastraadharane ||4||
Mooshikasana sheshabhushana ashesha vighnavinayaka | dasa purandaravitthaleshana esha gunagala pogaluve ||5||