
ರಚನೆ : ಪುರಂದರದಾಸರು
ಶರಣು ಸಿದ್ಧಿವಿನಾಯಕ | ಶರಣು ವಿದ್ಯಾಪ್ರದಾಯಕ ||
ಶರಣು ಪಾರ್ವತಿ ತನಯ ಮೂರುತಿ | ಶರಣು ಮೂಷಿಕವಾಹನ ||
ಶರಣು ಶರಣು. || ಪ ||
ನಿಟಿಲನೇತ್ರನೆ ದೇವಿಸುತನೇ ನಾಗಭೂಷಣಪ್ರೀಯನೆ |
ತಟಿಲ್ಲತಾಂಕಿತ ಕೋಮಲಾಂಗನೆ ಕರ್ಣಕುಂಡಲಧಾರನೆ || ೧ ||
ಬಟ್ಟ ಮುತ್ತಿನ ಪದಕ ಹಾರನೆ ಬಾಹುಹಸ್ತಚತುಷ್ಟನೆ
ಇಟ್ಟ ತೊಡುಗೆಯ ಹೇಮಕಂಕಣ ಪಾಶ ಅಂಕುಶಧಾರನೆ ||೨||
ಕುಕ್ಷಿ ಮಹಲಂಬೋದರನೆ ಇಕ್ಷುಚಾಪನ ಗೆಲಿದನೆ |
ಪಕ್ಷಿವಾಹನ ಸಿರಿಪುರಂದರ ವಿಟ್ಠಲನ ನಿಜದಾಸನೆ
Lyrics in English
Composer : Purandaradaasaru
Sharanu siddhi vinayaka sharanu vidya pradayaka
sharanu parvati tanaya muruti sharanu mushika vahana
nitila netrana varada putrane nagabhushana priyane
tatila tankita komalangane karna kundala dharane ||1||
batta muttina hara padaka bahu hasta chatustane
itta todugeya hema kankana pasha ankusha dharane||2||
kuksi maha lambodarane ikshu chapana gelidane
pakshi vahana siri purandara vittalana nija dasane||3||
…………………………………………………………………………………………………………