
ಶರಣು ಸಿರಿ ಮೋಹಿನಿ ಪುತ್ರ
ಮಣಿಕಂಠ ಅಯ್ಯಪ್ಪ
ಮಹಿಮೆಗಿರಿ ಶಬರಿಗಿರಿವಾಸನೆ ಅಯ್ಯಪ್ಪ |
ಸ್ವಾಮಿಯೇ ಶರಣಂ ಅಯ್ಯಪ್ಪ
ಶರಣಂ ಶರಣಂ ಅಯ್ಯಪ್ಪ||ಸ್ವಾಮಿಯೇ||
ಮನ ತುಂಬಿದೆ ಭಕುತಿಯಲಿ
ನಲಿವಿಂದಲಿ ಅರಳುತಿದೆ |
ನಿನ್ನ ಧ್ಯಾನದಿ ಮುಳುಗಿರುವ
ಈ ಹ್ರದಯವು ಮಣಿಯುತಿದೆ ||
||ಶರಣು||
ಸದಾ ಮುದ ಕೊಡುವ ಸದಾಶಿವನ ಸುತ
ಸದಾ ಶಾಂತಿಯನು ಕರುಣಿಸಲು ||
ಅಯ್ಯಪ್ಪನೇ ನಿನ್ನ ಸುನಾಮದ ಸುಧೆ
ಈಲೋಕದಲಿ ದಿನದಿನ ಹರಿದು ||
ಹಾಡಿನಲಿ ತಾ ಬೆರೆತು
ಆ ನಾದದಲಿ ಮನ ಕಲೆತು
ಸಂತೋಷ ಸಂಗೀತ ನನ್ನಲ್ಲಿ
ಏನೋ ಉಳ್ಳಾಸ ಉತ್ಸಾಹ ಮನಸಲ್ಲಿ
ಅಯ್ಯಪ್ಪನೆನ್ನುವ ನಿನ್ನ ನಾಮ ಭಲದಲ್ಲಿ||
ಹರುಷ ತುಂಬಿದೆ ||ಶರಣು||
ಈ ಜಗದಿ ಹರಡಿಹುದು ನಿನ್ನ ಮಹಿಮೆ
ಅನುರೇಣು ತುಂಬಿರುವ ಘನ ಮಹಿಮೆ ||
ಸುಖಶಾಂತಿ ಕೊಡು ಎಂದು ಬೇಡುತಲಿಹೆವು
ನಿನ್ನ ನಾಮ ಹಗಲಿರುಳು ಹಾಡುತಲಿಹೆವು ||ಶರಣು||
Lyrics in English
Sharanu siri mohini putra | manikanta ayyappa, mahimegiri shabarigirivasane ayyappa || swamiye sharanam ayyappa | sharanam sharanam ayyappa ||swamiye ||
Mana tumbide bhakutiyali, nalivindali aralutide | ninna dhayanadi mulugiruva ee hrudayavu maniyutide || sharranu ||
Sada muda koduva sadashivana suta sada shantiyanu karunisalu | ayyappane ninna sunamada sudhe, e lokadali dinadina haridu | haadinali taa beretu aa nadadali mana kaletu, santhosha sangeeta nannalli, eno utsaaha ullaasa manasalli | ayyappanennuva ninna nama baladalli, harusha tumbide || sharanu ||
Ee jagadi haradihudu ninna mahime, anurenu tumbiruva ghana mahime | sukhashanti kodu endu bedutalihevu, ninna nama hagalirulu haadutalihevu || sharanu ||
^^^^^^^^^^^^^^^^^^^^