ಸಂಗಸುಖವ ಬಯಸಿ ಬದುಕಿರೋ / sangasukhava bayasi badukiro

ಸಂಗಸುಖವ ಬಯಸಿ ಬದುಕಿರೋ
ರಂಗವಲಿದ ಭಾಗವತರ || ಪ||

ಸಂಗಸುಖವ ಬಯಸಿ ಬದುಕಿ
ಭಂಗಪಡಿಪ ಭವವ ನೂಕಿ
ಹಿಂಗದೇ ನರಸಿಂಗನನ್ನು
ಕಂಗಳಿಂದ ಕಾಣುತಿಹರ ||ಅ.ಪ.||

ಪುಟ್ಟಿದಾರಭ್ಯ ಪರಮ ವೈಷ್ಣವಾಧ್ಯಕ್ಷರೆನಿಸಿ
ಶಿಷ್ಟ ಸದಾಚಾರದಲ್ಲಿ ನಿಷ್ಠರಾಗಿ ನಿತ್ಯ ಮುದ್ದು
ಕೃಷ್ಣ ಕೀರ್ತನೆಯನು ಪಾಡುತ ಕಾವ್ಯಕರ್ಮ
ಬಿಟ್ಟು ಭಕ್ತಿಯನೆ ಮಾಡುತ ಮಧ್ವಮತವ
ಪುಷ್ಟಿಗೈಸಿ ಖಳರ ಕಾಡುತ ಬಂದ ಲಾಭ
ನಷ್ಟ ತುಷ್ಟಿಗಳಿಗೆ ಒಡಂಬಟ್ಟ ಬಗೆಯ ಪೇಳಲೆಷ್ಟು ||1||

ಭೂತದಯಾಶೀಲರಾದ ನೀತ ಗುರು ಜಗ-
ನ್ನಾಥ ವಿಠಲಾಂಕಿತವನು ಪಡೆದು ಸಂಗೀತ
ವೃತ್ತ ಪದ ಸುಳಾದಿಯ ಪೇಳಿ ಪ್ರೇ-
ಮಾತಿಶಯದಿ ಒಲಿಸಿಕೊಂಡು ಮಧುವಿರೋಧಿಯ ಒಲಿಸಿಕೊಂಡ
ಜಾತರಾಗಿ ಜವನಬಾಧೆಯ ಬಯಲು ಮಾಡಿ
ಖ್ಯಾತರಾಗಿಹರು ಪುಸಿಯ ಮಾತಿದಲ್ಲ ಮರೆಯಸಲ್ಲ ||2||

ಮೇದಿನಿಯೊಳಗುಳ್ಳ ಗಂಗಾದಿತೀರ್ಥ ಸತಿಗಳಿವರ
ಕಾದುಕೊಂಡಿಹರು ಬಿಡದೆ ಸ್ವಾದಿರಾಜೇಂದ್ರರ ಪ್ರ-
ಸಾದದಿಂದ ಹರಿಕಾಥಾಮೃತ ಸಾರತತ್ವ
ಸಾಧುಜನರಿಗಾಗಿ ಪ್ರಾಕೃತ ಪದ್ಧತಿಯಲಿ
ಸಾದರದಲಿ ಪೇಳಿ ದುಷ್ಕoತ ದೂರಮಾಡಿ
ಮೋದಿಸುವರಿಗೆಣೆಗಾಣೆ ಶ್ರೀದ ವಿಠಲನಾಣೆ ||3||

Lyrics in English


Sangasukhava bayasi badukiro
rangavalida bhagavatara || pa||


sangasukhava bayasi baduki
bhangapadipa bhavava nuki
hingade narasinganannu
kangalinda kanutihara ||a.Pa.||

Puttidarabhya parama vaisnavadhyaksarenisi
Shishta sadacharadalli nishtaragi nitya muddu
krishna kirtaneyanu paduta kavyakarma
bittu bhaktiyane maduta madhvamatava
pushtigaisi khalara kaduta banda labha
nashta tushtigalige odambatta bageya pelaleshtu ||1||

Bhutadayasheelarada nita guru jaga-
nnatha viṭhalankitavanu paḍedu sangita
vrutta pada suladiya peli pre-
matishayadi olisikondu madhuvirodhiya olisikonda
jataragi javanabadheya bayalu madi
khyataragiharu pusiya matidalla mareyasalla ||2||

Mediniyolagulla gangaditirtha satigalivara
kadukondiharu bidade svadirajendrara pra-
sadadinda harikathamruta saratatva
sadhujanarigagi prakruta paddhatiyali
sadaradali peli dushkanta duramadi
modisuvarigenegane sridavithalanane ||3||


Leave a Reply