ಸಂದಿತಯ್ಯಾ ಪ್ರಾಯವು ಸಂದಿತಯ್ಯಾ / Sanditayya prayavu sanditayya

ಸಂದಿತಯ್ಯಾ ಪ್ರಾಯವು ಸಂದಿತಯ್ಯಾ ಕೃಷ್ಣಾ….|
ಒಂದು ದಿನವು ಸುಖವು ಇಲ್ಲ ಕುಂದಿ ಹೋದೆ ಕಷ್ಟದಿಂದ |
ಬಂಧನವನು ಬಿಡಿಸುದೆನ್ನ ತಂದೆ ನೀನೆ ರಕ್ಷಿಸಯ್ಯ ||
||ಸಂದಿತಯ್ಯಾ||

ತಂದೆ ಉದರದಿ ಮೂರು ತಿಂಗಳು ಸಂದು ಹೋಯಿತು ತಿಳಿಯದೆ |
ಬೆಂದೆ ನವಮಾಸದೊಳು ಗರ್ಭದಿ ನಿಂದು ತಾಯಿಯ ಗರ್ಭದಿ |
ಕುಂದಿತಾಯುವು ಒಂದು ವರ್ಷ ಇಂದಿರೇಶನೆ ಕೇಳು ದುಃಖವ |
ಬಂಧನದೊಳಗೆ ನಿಂದೆನನುದಿನ ಮುಂದೆ ಮೋಕ್ಷದ ಮಾರ್ಗ ಕಾಣದೆ ||
||ಸಂದಿತಯ್ಯಾ||

ಕತ್ತಲೆಯೊಳಿರಲಾರೆ ಎನುತಲಿ ಹೊತ್ತೆ ಹರಕೆಯ ನಿನ್ನೊಳು|
ನಿತ್ಯದಲಿ ಮಲಮೂತ್ರ ಬಾಲ್ಯದಿ ಹೊತ್ತು ಕಳೆದೆನು ಎನ್ನೊಳು |
ಮತ್ತೆ ಹದಿನಾರರ ಪ್ರಾಯದಿ ಉಕ್ಕಿ ನಡೆದೆನು ಧರೆಯೊಲು |
ಹತ್ತಿ ಸಂಸಾರದ ಮಾಯೆಯು ಸಿಕ್ಕಿದೆನು ಭವ ಬಲೆಯೊಳು ||
||ಸಂದಿತಯ್ಯಾ||

ಎಡೆಬಿಡದೆ ಅನುದಿನವು ಪಾಪದ ಕಡಲೊಳಗೆ ನಾ ಬಿದ್ದೆನೊ |
ದಡವ ಕಾಣದೆ ದುಃಖದೊಳು ಬೆಂದೊಡಲೊಳಗೆ ನಾನೊಂದೆನೊ |
ಬಿಡದೆ ನಿನ್ನಯ ಧ್ಯಾನವೆಂದೆಂಬ ಹಡಗ ಏರಿಸು ಎಂದೆನೊ |
ದೃಡದಿ ನಿನ್ನಯ ಪಾದ ಸೇರಿಸೊ ಒಡೆಯ ಪುರಂದರ ವಿಠ್ಠಲ ||
||ಸಂದಿತಯ್ಯಾ||

Lyrics in English

Sanditayya prayavu sanditayya krishna …. | ondu dinavu sukhavu kundi hode kashtadinda | bandhanavanu bidisudenna tande neene rakshiseyya || sanditayya ||

Tande udaradi mooru tingalu sandu hoyitu tiliyade | bende navamaasadolu garbhadi nindu taayiya garbhadi | kunditaayuvu ondu varsha indireshane kelu dukhava | bandanadolage nindenanudina munde mokshada maarga kanade || sanditayya ||

Kattaleyoliralaare enutali hotte harakeya ninnolu | nityadali malamutra balyadi hottu kaledenu ennolu | matte hadinaarara prayadi ukki nadedenu dhareyolu | hatti samsarada mayeyu sikkidenu bhava baleyolu || sanditayya ||

Edebidade anudinavu papada kadalolage naa biddeno | dadava kaanade dukhdolu bendodalolage naanondeno | bidade ninnaya dhyanavendemba hadaga arisu endeno | drudadi ninnaya paada seriso odeya purandara vittalaa …. || sanditayya ||


Leave a Reply