ಸತತ ಪಾಲಿಸೋ ಎನ್ನ ಯತಿ ರಾಘವೇಂದ್ರ / Satata palisu Enna yati raghavendra


ದಾಸರು : ಶ್ರೀ ಶ್ಯಾಮ ಸುಂದರ ದಾಸರು.
ಅಂಕಿತನಾಮ : ಶ್ರೀ ಶ್ಯಾಮ ಸುಂದರ ವಿಠಲ ದಾಸರು.

ಸತತ ಪಾಲಿಸೋ ಎನ್ನ  ಯತಿ ರಾಘವೇಂದ್ರ
ಪತಿತ ಪಾವನ ಪವನ  ಸುತಮತಾಂಬುಧಿ ಚಂದ್ರ ||ಪ||

ನಂಬಿದೆನು ನಿನ್ನ ಚರಣಾಂಬುಜವ ಮನ್ಮನದ ಹಂಬಲವ
ಪೂರೈಸೊ ಬೆಂಬಿಡದಲೆ  ಕುಂಭಿಣೀಸುರ
ನಿಕುರುಂಭ ವಂದಿತ ಜಿತ
ಶಂಬರಾಂತಕ ಶಾತಕುಂಭ ಕಶ್ಯಪ ತನಯ ||1||

ಕ್ಷೋಣಿಯೊಳು ನೀ ಕುಂಭಕೋಣ ಕ್ಷೇತ್ರದಿ ಜನಿಸಿ ವೀಣ ವೆಂಕಟ ಅಭಿದಾನದಿಂದ
ಸಾನುರಾಗದಿ ದ್ವಿಜನ ಪ್ರಾಣ ಉಳುಹಿದ ಮಹಿಮೆ
ಏನೆಂದು ಬಣ್ಣಿಸಲಿ ಜ್ಞಾನಿ ಕುಲತಿಲಕ.||2||

ಮಂದಮತಿಗಳ ಸಂಗದಿಂದ ನಿನ್ನಯ ಚರಣ ಇಂದಿನ ತನಕ ನಾ ಪೊಂದಲಿಲ್ಲ
ಕುಂದು ಎಣಿಸದೆ ಕಾಯೊ ಕಂದರ್ಪಪಿತ ಶಾಮ
ಸುಂದರನ ದಾಸ
ಕರ್ಮಂದಿ ಕುಲವರ್ಯ ||3||

Lyrics in English

Satata paliso enna yati raghavendra
patita paavana pavana suta matambudhi Chandra ||pa||

Nambidenu ninna charanaambujava manmanada
hambalava pooraisu bembidadale kumbhinisura
nikurumbha vandita jita shambarantaka
ahaatakumbha kashyapa taanaya ||1||

Kshoniyolu nee kumbhakona kshetradi
janisi Veena venkata abhidaanadinda |
sanuragadi dwijaana prana uluhida mahine
enendu bannisalli jnani kulatilaka ||2||

Mandammatogala sangadina ninnaya
charana indina tanaka Naa pondalilla ||
kundu enisade kayo kandarpapita shama
sundaarana dasa
ra karmandi kulavarya ||3||


Leave a Reply